×
Ad

ಸೈದ್ಧಾಂತಿಕವಾಗಿ ಎದುರಿಸಲಾಗದೆ ಈ ರೀತಿ ಬಾಯಿ ಮುಚ್ಚಿಸುವುದು ಸರ್ವಾಧಿಕಾರಿ ಧೋರಣೆ: ಸಿದ್ದರಾಮಯ್ಯ ವಾಗ್ದಾಳಿ

Update: 2022-04-25 18:38 IST

ಬೆಂಗಳೂರು: 'ಸುಳ್ಳು ಆರೋಪದ ಮೇಲೆ ಗುಜರಾತ್ ಶಾಸಕ ಮತ್ತು ದಲಿತ ಹೋರಾಟಗಾರ ಜಿಗ್ನೆಶ್ ಮೆವಾನಿ ಅವರ ಬಂಧನದ ಮೂಲಕ ಬಿಜೆಪಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಅತ್ಯಂತ ಖಂಡನೀಯ. ರಾಜಕೀಯ ವಿರೋಧಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ಈ ರೀತಿ ಬಾಯಿ ಮುಚ್ಚಿಸುವುದು ಸರ್ವಾಧಿಕಾರಿ ಧೋರಣೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ' ಯಾವುದೇ ಹೇಳಿಕೆಗಳಿಂದ ಯಾರಿಗಾದರೂ ಮಾನ ನಷ್ಟವಾಗಿದ್ದರೆ ಸಂಬಂಧಿತರಿಗೆ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅವಕಾಶ ಇದೆ. ಇದರ ಬದಲಿಗೆ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಹೊರಟಿರುವುದು ಫ್ಯಾಸಿಸ್ಟ್ ಬುದ್ದಿ. ಭಾರತದಲ್ಲಿ ಇದು ನಡೆಯದು' ಎಂದು ಹೇಳಿದರು.

'ದೇಶವನ್ನು ಪ್ರೀತಿಸುವ, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರೂ ಜಿಗ್ನೇಶ್ ಮೆವಾನಿ ಜೊತೆ ಇದ್ದಾರೆ. ಒಬ್ಬ ಜಿಗ್ನೇಶ್ ರನ್ನು ಜೈಲಿಗೆ ಕಳಿಸಿದ್ದೇವೆ ಎಂದು ಬೀಗುವುದು ಬೇಡ, ಈ ಬೆಳವಣಿಗೆಯಿಂದಾಗಿ ದೇಶದ ತುಂಬ ನೂರಾರು ಜಿಗ್ನೇಶರು ಹುಟ್ಟಿಕೊಂಡು ಹೋರಾಟವನ್ನು ಮುಂದುವರಿಸಲಿದ್ದಾರೆ ಎನ್ನುವುದು ನೆನಪಲ್ಲಿರಲಿ' ಎಂದು ತಿಲಸಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News