×
Ad

'ಅಂಕೇಗೌಡ ಪುಸ್ತಕ ಮನೆ’ಗೆ ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ

Update: 2022-04-25 23:08 IST

ಮಂಡ್ಯ, ಎ.25: ಪಾಂಡವಪುರ ತಾಲೂಕಿನ ಹರಳಹಳ್ಳಿಯ ‘ಪುಸ್ತಕ ಮನೆ’ ಅಂಕೇಗೌಡ ಅವರಿಗೆ ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್ ಸಂಸ್ಥೆಯು ‘ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ತನಗೆ ಬಂದಿರುವ ಪ್ರಶಸ್ತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಕೇಗೌಡ,  ತಾವು ಸಂಗ್ರಹಿಸಿರುವ 50 ವರ್ಷಗಳ ಅವಧಿಯಲ್ಲಿ 15 ಭಾಷೆಯ 1.5 ಮಿಲಿಯನ್ ಪುಸ್ತಕಗಳನ್ನು ಸಂಗ್ರಹಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.

2,500 ಮಹಾತ್ಮಗಾಂಧಿ ಕುರಿತ ಕೃತಿಗಳು, 25,00 ಭಗವದ್ಗೀತೆ. ಸುಮಾರು 6 ಲಕ್ಷ ಕನ್ನಡ ಪುಸ್ತಕ, 5 ಲಕ್ಷ ಆಂಗ್ಲಭಾಷೆ ಕೃತಿಗಳು, 36 ಸಾವಿರ ಅಂತರಾಷ್ಟ್ರೀಯ ಹಾಗೂ 15 ಸಾವಿರ ಕನ್ನಡ ನಿಯತಕಾಲಿಕೆಗಳು ಅಂಕೇಗೌಡರ ಪುಸ್ತಕಮನೆಯಲ್ಲಿವೆ.” 

ಪುಸ್ತಕಗಳನ್ನು ಸಂಗ್ರಹಿಸಲು ನಾನು ಪಾಂಡವಪುರ ಸಕ್ಕರ ಕಾರ್ಖಾನೆಯಲ್ಲಿ ಪಡೆದ ಸಂಬಳದ ಹಣ ಮತ್ತು ನಿವೃತ್ತಿಯ ನಂತರ ಬಂದ 30 ಲಕ್ಷ ರೂ. ಹಾಗೂ ಮೈಸೂರಿನಲ್ಲಿ ಕೊಂಡಿದ್ದ ನಿವೇಶನ ಮಾರಿ ಮುಂದಿನ ಪೀಳಿಗೆಗೆ ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದೇನೆ ಎಂದು ಅಂಕೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News