ಜೂನ್ ಕೊನೆ ವಾರದಲ್ಲಿ ಪಿಯು ಫಲಿತಾಂಶ

Update: 2022-04-26 13:58 GMT

ಬೆಂಗಳೂರು, ಎ.26: ಜೂನ್ ಕೊನೆ ವಾರದಲ್ಲಿ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಸಿದ್ಧತೆಗಳು ಆರಂಭವಾಗಿವೆ. ಎ.22ರಿಂದ ಪಿಯು ಪರೀಕ್ಷೆ ಆರಂಭವಾಗಿದ್ದು, ಒಂದೊಂದು ವಿಷಯದ ಪರೀಕ್ಷೆ ಆಗುತ್ತಿದ್ದಂತೆ ಮೌಲ್ಯಮಾಪನ ಶುರುವಾಗುತ್ತದೆ.

ಜೂನ್ ಕೊನೆ ವಾರ ಪಿಯುಸಿ ಫಲಿತಾಂಶ ಬರುವುದು ಪಕ್ಕಾ ಎಂದು ಮೂಲಗಳಿಂದ ತಿಳಿದು ಬಂದಿದೆ. ಮೇ 20ರಿಂದ ಜೂ.15ರೊಳಗೆ ಮೌಲ್ಯಮಾಪನ ಮುಗಿಸಿ ಜೂನ್ ಕೊನೆ ವಾರದೊಳಗೆ ಫಲಿತಾಂಶ ಪ್ರಕಟ ಮಾಡಬೇಕೆಂದು ಕಾಲಾವಧಿಯನ್ನು ನಿಗದಿ ಮಾಡಲಾಗಿದೆ. 

ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ಹೀಗಾಗಿ, ಆದಷ್ಟು ಬೇಗ ಫಲಿತಾಂಶ ನೀಡುತ್ತೇನೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್.ರಾಮಚಂದ್ರನ್ ಅವರು ತಿಳಿಸಿದ್ದಾರೆ. 

ಕಳೆದ ಎರಡು ವರ್ಷಗಳಿಂದ ಕೊರೊನದಿಂದ ಪರೀಕ್ಷೆ ನಡೆಯದೆ ಫಲಿತಾಂಶದ ಸಮಯದಲ್ಲಿ ಏರುಪೇರಾಗಿತ್ತು. ಈಗ ನಿಗದಿತ ಅವಧಿಯಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಫಲಿತಾಂಶವನ್ನೂ ನಿಗದಿತ ಅವಧಿಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News