ಇಂಥದ್ದೆ ಅಂಗಡಿಯಲ್ಲಿ ಚಿನ್ನ ಖರೀದಿಸು ವಂತೆ ಗ್ರಾಹಕರಿಗೆ ಒತ್ತಡ ಹೇರುವುದು ಸರಿಯಲ್ಲ: ಟಿ. ಎ. ಶರವಣ
ಬೆಂಗಳೂರು: ಅಕ್ಷಯ ತೃತೀಯ ರಾಜ್ಯದ ಜನಮಾನಸದ ಒಂದು ಭಾವನಾತ್ಮಕ ನಂಬಿಕೆಯ ಬಂಗಾರದ ಹಬ್ಬವಾಗಿದ್ದು ಅದಕ್ಕೆ ಜಾತಿ, ಧರ್ಮದ ಹೆಸರಲ್ಲಿ ವ್ಯಾಪಾರಕ್ಕೆ ನಿಭಂದನೆ ಹಾಕುವುದು ಒಳ್ಳೆ ಯದಲ್ಲ ಎಂದು ರಾಜ್ಯದ ಚಿನ್ನಾಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಟಿ. ಎ. ಶರವಣ ಹೇಳಿದ್ದಾರೆ.
ಕೆಲವು ಸಂಘಟನೆಗಳು ಜಾತಿ, ಧರ್ಮದ ಆಧಾರದ ಮೇಲೆ ಚಿನ್ನ ಖರೀದಿಸುವಂತೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ವ್ಯಾಪಾರವೇ ಒಂದು ಧರ್ಮ. ಅದರಲ್ಲೂ ಚಿನ್ನ, ಬೆಳ್ಳಿ ಖರೀದಿ ವ ಹಿವಾಟು ಗ್ರಾಹಕರ ನಂಬಿಕೆಯ ಮೇಲೆ ನಡೆಯುತ್ತದೆ. ಇಂಥದ್ದೆ ಅಂಗಡಿಯಲ್ಲಿ ಚಿನ್ನ ಖರೀದಿಸು ವಂತೆ ಗ್ರಾಹಕರಿಗೆ ಒತ್ತಡ ಹೇರುವುದು ಸರಿಯಲ್ಲ. ಇದರಿಂದ ಗ್ರಾಹಕರ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಹೇಳಿದ್ದಾರೆ.
ಅಕ್ಷಯ ತೃತೀಯ ಬಂಗಾರದ ಹಬ್ಬದ ಮೂಲವೇ ಸಮೃದ್ಧಿ. ಈ ಸಮೃದ್ದಿಯ ಆಶಯದ ಹಿಂದೆ ಗ್ರಾಹಕರ ನಂಬಿಕೆಯ ಸೆಲೆ ಇದೆ. ಇಲ್ಲಿ ಗ್ರಾಹಕ -ವಹಿವಾಟು ದಾರರ ಸಂಬಂಧ ವಷ್ಟೇ ಅಲ್ಲ, ಮಾನವೀಯತೆ ಸಂಬಂಧ ವೂ ಅಷ್ಟೇ ಮುಖ್ಯ. ವ್ಯಾಪಾರ ವಹಿವಾಟಿಗೆ ಮಾನವೀಯ ಸಂಬಂಧವೆ ಆಧಾರ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.