×
Ad

ಡಿಕೆಶಿ ಜೊತೆ ನಿಮ್ಮ ಬಹುತೇಕ ನಾಯಕರ ಫೋಟೋಗಳೂ ಇವೆ, ಅವರನ್ನೆಲ್ಲ ಉಚ್ಛಾಟಿಸುವಿರಾ: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

Update: 2022-04-26 20:21 IST

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿಯ ಅಕ್ರಮ‌ ಪ್ರಕರಣದ ಆರೋಪ ಎದುರಿಸುತ್ತಿರುವ ದಿವ್ಯಾ ಹಾಗರಗಿ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜೊತೆ ನಿಂತಿದ್ದ ಫೋಟೊ ಒಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಡಿ.ಕೆ ಶಿವಕುಮಾರ್  ಅವರೊಂದಿಗೆ ಕೇವಲ ದಿವ್ಯಾ ಹಾಗರಗಿಯ ಫೋಟೋ ಮಾತ್ರವಲ್ಲ, ನಿಮ್ಮ ಪಕ್ಷದ ಬಹುತೇಕ ನಾಯಕರ ಫೋಟೋಗಳೂ ಇವೆ. ಹಾಗೆಂದ ಮಾತ್ರಕ್ಕೆ ಅವರೆಲ್ಲ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ ಎಂದು ಉಚ್ಛಾಟಿಸುವಿರಾ? ನಿಮ್ಮ ನಾಯಕರೇ ಆಕೆಯ ಮನೆಯನ್ನು ಹುಡುಕಿ ಹೋಗಿ ಆತಿಥ್ಯ ಸ್ವೀಕರಿಸಿದ್ದು ಯಾವ ಕಾರಣಕ್ಕೆ, ಆಕೆಯ ಬಂಧನವಾಗದಿವುದು ಏಕೆ?' ಎಂದು ಪ್ರಶ್ನಿಸಿದೆ. 

ಮಂಗಳವಾರ ದಿವ್ಯಾ ಹಾಗರಗಿ ಜೊತೆ ಡಿ.ಕೆ ಶಿವಕುಮಾರ್ನಿಂತಿದ್ದ ಫೋಟೊ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಬಿಜೆಪಿ,  ' ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ!' ಎಂದು ತರಾಟೆಗೆ ತೆಗೆದುಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News