×
Ad

ಈ ಸಮರ್ಥನೆಗೂ, ದಿವ್ಯಾ ಹಾಗರಗಿ ಬಂಧನ ಆಗದಿರುವುದಕ್ಕೂ ಗಾಢ ಸಂಬಂಧ ಇದೆಯಲ್ಲವೇ?: ಗೃಹ ಸಚಿವರ ವೀಡಿಯೊ ಹಂಚಿದ ಕಾಂಗ್ರೆಸ್

Update: 2022-04-27 11:46 IST

ಬೆಂಗಳೂರು: PSI ಹುದ್ದೆ ನೇಮಕಾತಿಯ ಅಕ್ರಮ‌ ಪ್ರಕರಣದ ಕುರಿತು ಕಾಂಗ್ರೆಸ್- ಬಿಜೆಪಿ ಮಧ್ಯೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದು, ಇದೀಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ವಿಧಾನಸಭೆ ಅಧಿವೇಶನ ವೇಳೆ ಸದನದಲ್ಲಿ ಪಿಎಸ್ ಐ ನೇಮಕಾತಿಯ ಬಗ್ಗೆ ಮಾತನಾಡಿರುವ ವಿಡಿಯೋ ಒಂದನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ 'ಈ ಸಮರ್ಥನೆಗೂ, ದಿವ್ಯಾ ಹಾಗರಗಿ ಬಂಧನ ಆಗದಿರುವುದಕ್ಕೂ ಗಾಢಸಂಬಂಧ ಇದೆಯಲ್ಲವೇ' ಎಂದು ಪ್ರಶ್ನಿಸಿದೆ. 

PSI ನೇಮಕಾತಿಯಲ್ಲಿ ಒಂದೇ ತಾಲೂಕಿನ ಒಂದೇ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚು ಮಂದಿ ಆಯ್ಕೆಯಾಗಿರುವುದು ಅನುಮಾನ ಹುಟ್ಟು ಹಾಕಿದೆ. ಇದು ಹೇಗೆ ಸಾಧ್ಯ? ಎಂದು ಸದನದಲ್ಲಿ ಶಾಸಕರೊಬ್ಬರ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಸಚಿವರು, 'ಹಾಗೆ ಆಗೋದಕ್ಕೆ ಸಾಧ್ಯ ಇಲ್ಲ, ಪತ್ರಿಕೆಯಲ್ಲಿ ಬಂದಿರುವುದು ತಪ್ಪು ಮಾಹಿತಿ  ಇದೆ' ಎಂದು ಹೇಳುವುದು ಕಾಂಗ್ರೆಸ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿದೆ. 

'ಅಕ್ರಮವೇ ಆಗಿಲ್ಲವೆಂದು ಇಷ್ಟು ಆತ್ಮವಿಶ್ವಾಸದಿಂದ ಸದನದಲ್ಲಿ ಸಮರ್ಥಿಸಿದ ಗೃಹ ಸಚಿವರೇ, ಈ ಸಮರ್ಥನೆಗೂ, ದಿವ್ಯಾ ಹಾಗರಗಿ ಬಂಧನ ಆಗದಿರುವುದಕ್ಕೂ, ನೀವು ಅವರ ಆದರಾತಿಥ್ಯ ಸ್ವೀಕರಿಸಿದ್ದಕ್ಕೂ ಗಾಢಸಂಬಂಧ ಇದೆಯಲ್ಲವೇ? ನಿಮ್ಮ ಸಮರ್ಥನೆಯನ್ನ ಬಾಲಿಶತನ ಎನ್ನೋಣವೇ? ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ ? ಎಂದು ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News