×
Ad

ಹನೂರು: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ

Update: 2022-04-27 17:47 IST
ಗ್ರಾಮಲೆಕ್ಕಿಗ ದಿನೇಶ್

ಚಾಮರಾಜನಗರ: ಗ್ರಾಮಲೆಕ್ಕಿರೊಬ್ಬರು ರೈತರಿಂದ ಜಮೀನಿನ ಖಾತೆ ಮಾಡಿಕೊಡಲು ರೈತರಿಂದ ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕಾರ ಮಾಡುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಹನೂರಿನಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿರುವ  ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮಲೆಕ್ಕಿಗ ದಿನೇಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. 

ಗ್ರಾಮಲೆಕ್ಕಿಗ ದಿನೇಶ್ ಅವರು ರಾಮಪುರ ಹೋಬಳಿಯ ಕುರಟ್ಟಿ ಹೊಸೂರು ವೃತ್ತದ ಗ್ರಾಮಲೆಕ್ಕಿಗ ರಾಗಿದ್ದು ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 10 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದರು ಈ ಬಗ್ಗೆ ರೈತರು ಎಸಿಬಿ ಅಧಿಕಾರಿಗಳಿಗೆ ಲಿಖಿತವಾಗಿ ದೂರು ದಾಖಲಿಸಿದ್ದರು. ಈ  ಬಗ್ಗೆ ಬಂದ ದೂರಿನ ಮೇರೆಗೆ ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿಗಳಾದ ನಾಗಲಕ್ಷ್ಮಿ ಮಹದೇವಸ್ವಾಮಿ ಕೃಷ್ಣಕುಮಾರ್ ದಾಳಿ ನಡೆಸಿದರು.

ಈ ವೇಳೆ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಲೆಕ್ಕಿಗ ದಿನೇಶ್ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ .

ಈ ಬಗ್ಗೆ  ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ  ಮಾತನಾಡಿ,  ಯಾವುದೇ ಕಾರಣಕ್ಕೂ ದೂರುದಾರರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News