ಹೇಮಾವತಿ ಜಲಾಶಯ ಭೂ ಹಗರಣ: ಭಾಗಿಯಾದ ಅಧಿಕಾರಿಗಳ ವಿರದ್ಧ ಕ್ರಿಮಿನಲ್ ಕೇಸ್; ಸಚಿವ ಆರ್. ಅಶೋಕ್

Update: 2022-04-27 14:49 GMT

ಹಾಸನ:  ಏ,27: ಹೇಮಾವತಿ ಜಲಾಶಯ ಅಕ್ರಮ ಭೂ ಹಗರಣ ಕುರಿತು ಯೋಜನೆ ಭೂಮಿ ದುರುಪಯೋಗ ಬಗ್ಗೆ ತನಿಖೆ ನಡೆಸಲಾಗಿದ್ದು, ಸುಮಾರು 800 ಎಕರೆ ಬೋಗಸ್ ಭೂಮಿ ಗುರುತಿಸಲಾಗಿದ್ದು,  ನಕಲಿ ಫಲಾನುಭವಿಗಳ ಹೆಸರು ರದ್ದುಪಡಿಸಿ, ಶೀಘದಲ್ಲಿಯೇ ಪ್ರಭಾವಿಗಳ ಹೆಸರುಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಧ್ಯಮದೊಂದಿಗೆ ಮಾತನಾಡಿ, ಹೇಮಾವತಿ ಜಲಾಶಯದ ಆಕ್ರಮ ಭೂ ಹಗರಣ. ಯೋಜನೆಯಲ್ಲಿ ಭೂಮಿ ದುರುಪಯೋಗದ ಬಗ್ಗೆ ತನಿಖಾ ಆಯೋಗ ರಚನೆ ನೇಮಿಸಲಾಗಿದ್ದೆ. ತನಿಖೆ ಪ್ರಗತಿಯಲ್ಲಿದೆ. ತನಿಖೆಯಲ್ಲಿ ಸುಮಾರು 800 ಎಕರೆ ಬೋಗಸ್ ಭೂಮಿ ಗುರುತಿಸಲಾಗಿದೆ. ಅಕ್ರಮ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು. ನಕಲಿ ಫಲಾನುಭವಿಗಳ ಆದೇಶ ರದ್ದಪಡಿಸಲಾಗುವುದು ಎಂದು ತಿಳಿಸಿದರು.

ಹಗರಣದ ಹಿಂದೆ ಪ್ರಭಾವಿಗಳು ಇದ್ದರೆ ಅಂತವರ ಪಟ್ಟಿ ಬಿಡುಗಡೆ ಮಾಡುತ್ತೇವೆ. ಯಾವ ಮುಲಾಜು ಇಲ್ಲದೇ ಆಕ್ರಮ ಮಂಜೂರಾತಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೆವೆ. ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮ್ಮೆ ಹೂಡಲಾಗುವುದು, ಇದರಲ್ಲಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News