×
Ad

'ಮಿಸ್ಟರ್ ಪಾನ್ ಮಸಾಲ ಅಜಯ್ ದೇವಗನ್...': ಹಿಂದಿ ರಾಷ್ಟ್ರ ಭಾಷೆ ಹೇಳಿಕೆಗೆ ಚೇತನ್ ಅಹಿಂಸಾ ಪ್ರತಿಕ್ರಿಯೆ

Update: 2022-04-27 22:04 IST
ನಟ ಚೇತನ್ ಅಹಿಂಸಾ | ಅಜಯ್ ದೇವಗನ್

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ವಿಚಾರದ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ನಟ ಚೇತನ್ ಅಹಿಂಸಾ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. 

"ಮಿಸ್ಟರ್ ಪಾನ್ ಮಸಾಲ ಅಜಯ್ ದೇವಗನ್... ಸುಮ್ಮನಿದ್ದು ದಡ್ಡ ಅನಿಸಿಕೊಳ್ಳುವುದು ಬಾಯಿಬಿಟ್ಟು ಅದರ ಬಗ್ಗೆ ಏನೂ ಅನುಮಾನ ಇರದಂತೆ ಮಾಡುವುದು ಎಷ್ಟೋ ಉತ್ತಮ" ಅನ್ನುವ ಮಾತು ತಮಗೆ ಚೆನ್ನಾಗಿ ಒಪ್ಪುತ್ತದೆ. ಎಂತಾ ಅಜ್ಞಾನ ಮತ್ತು ಅಹಂಕಾರ ಎಂದು ಹೇಳಿದ್ದಾರೆ.

'ಹಿಂದಿ ಯಾವತ್ತೂ ರಾಷ್ಟ್ರ ಭಾಷೆ ಆಗಿಲ್ಲ ಆಗುವುದೂ ಇಲ್ಲ ಎಂಬುದನ್ನ ಮತ್ತು ಸ್ಟಾರ್‌ಗಳು ಖಾಲಿ ಕೊಡಗಳು ಎಂಬುದನ್ನ ನೆನಪಿಸಿದ್ದಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ. 

ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಇತ್ತೀಚೆಗೆ ಸುದೀಪ್‌ ನೀಡಿದ್ದ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಬಾಲಿವುಡ್‌ ನಟ ಅಜಯ್‌ ದೇವಗನ್‌ “ಸಹೋದರ ಸುದೀಪ್‌, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆ ಆಗಿದ್ದು, ಇಂದೂ ಮತ್ತು ಎಂದೆಂದಿಗೂ ಹಾಗೆಯೇ ಇರುತ್ತದೆ.” ಎಂದು ಟ್ವೀಟ್‌ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News