×
Ad

ಮಡಿಕೇರಿ; ಅಂತ್ಯಕ್ರಿಯೆಗೆ ತೆರಳಿದವರ ಮೇಲೆ ಹೆಜ್ಜೇನು ದಾಳಿ : ಓರ್ವ ಸ್ಥಳದಲ್ಲೇ ಮೃತ್ಯು

Update: 2022-04-28 15:59 IST

ಮಡಿಕೇರಿ : ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಜ್ಜೇನು ದಾಳಿ ಮಾಡಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಅಬ್ಬೂರುಕಟ್ಟೆ ಗ್ರಾ.ಪಂ ವ್ಯಾಪ್ತಿಯ ಹಾಡಿಯಲ್ಲಿ ನಡೆದಿದೆ.

ಹಾಡಿಯ ನಿವಾಸಿ ಗೋವಿಂದ (48) ಮೃತರು ಎಂದು ಗುರುತಿಸಲಾಗಿದೆ.

ಹಾಡಿಯ ಕುಮಾರ ಎಂಬವರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಜ್ಜೇನು ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡ ಗೋವಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಂತ್ಯಕ್ರಿಯಲ್ಲಿ ಭಾಗಿಯಾಗಿದ್ದವರು ಹೆಜ್ಜೇನು ದಾಳಿ ಕಂಡು ಮೃತದೇಹವನ್ನು ಸ್ಥಳದಲ್ಲೇ ಬಿಟ್ಟು ಪಾರಾಗಿದ್ದಾರೆ. ಹೆಜ್ಜೇನು ದಾಳಿಗೆ ಒಳಗಾಗಿ ಗಾಯಗೊಂಡ ಮುತ್ತಪ್ಪ, ಪಾರ್ವತಿ, ಅಣ್ಣಯ್ಯ, ಪರಣ್ಣಿ, ನಾಗಣ್ಣ, ಗೌಡ ಎಂಬವರನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News