×
Ad

ಬೆಂಗಳೂರು: 150ನೇ ದಿನಕ್ಕೆ ಕಾಲಿಟ್ಟ ಐಟಿಐ ಕಾರ್ಮಿಕರ ಅಹೋರಾತ್ರಿ ಧರಣಿಗೆ ನಿರ್ದೇಶಕ, ನಟ ಬಿ.ಸುರೇಶ್ ಬೆಂಬಲ

Update: 2022-04-29 20:26 IST

ಬೆಂಗಳೂರು: ಐಟಿಐಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ಮೂಲಭೂತ ಹಕ್ಕಿನಡಿ ಸಂಘಟನೆ ಮಾಡಿದ್ದಕ್ಕಾಗಿ ಮತ್ತು ಕಾನೂನು ಬದ್ಧವಾದ ಹಕ್ಕುಗಳಿಗಾಗಿ ಒತ್ತಾಯಿಸಿದ್ದಕ್ಕಾಗಿ ಐಟಿಐ ಕಾರ್ಖಾನೆಯ ಆಡಳಿತ ಮಂಡಳಿ ಮಹಿಳೆಯರು ಸೇರಿದಂತೆ ಒಟ್ಟು 80 ಕಾರ್ಮಿಕರಿಗೆ ಕಾನೂನುಬಾಹಿರವಾಗಿ ಉದ್ಯೋಗವನ್ನು ನಿರಾಕರಿಸಿರುವುದು ಖಂಡನೀಯ ಎಂದು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಮತ್ತು ಪ್ರಗತಿಪರ ಚಿಂತಕರಾದ ಬಿ.ಸುರೇಶ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ  ನಗರದಲ್ಲಿ  ಕಾರ್ಮಿಕರ ಧರಣಿಯ್ಲಲಿ ಭಾಗವಹಿಸಿ ಮಾತನಾಡಿದ ಅವರು,  150 ದಿನ ಪೂರೈಸಿದೆ. 3 ರಿಂದ 30 ವರ್ಷಗಳ ವರೆವಿಗೂ ಹೆಚ್ಚು ಕಾಲ ಕೆಲಸ ಮಾಡಿದ ಕಾರ್ಮಿಕರನ್ನು ಹಠಾತ್ ಕೆಲಸದಿಂದ ವಜಾಗೊಳಿಸಿ ಬೀದಿಪಾಲು ಮಾಡಿದ ಐಟಿಐ ಆಡಳಿತ ಮಂಡಳಿಯ ನಡೆ ಸರಿಯಲ್ಲ. ಕೇಂದ್ರ ಸರಕಾರದ ಪ್ರಾದೇಶಿಕ ಕಾರ್ಮಿಕ ಇಲಾಖೆಯ ಆಯುಕ್ತರ ಮುಂದೆ ನಡೆಯುತ್ತಿರುವ ಸಂಧಾನ ಸಭೆಯಲ್ಲಿ ಕಾರ್ಮಿಕರಿಗೆ ಕೆಲಸ ನೀಡುವುದಾಗಿ ಐಟಿಐ ಆಡಳಿತ ಮಂಡಳಿಯು ಒಪ್ಪಿದ್ದು, ಈಗ ನಕಾರ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. 

ಕಾರ್ಮಿಕರ ಈ ಕೆಟ್ಟ ಪರಿಸ್ಥಿತಿಗೆ 1996 ರಲ್ಲಿ ಸರ್ಕಾರವು ಹೂಡಿಕೆ ಮಾಡುವುದನ್ನು ಹಿಂಪಡೆಯುವ ನೀತಿಯನ್ನು ಜಾರಿ ಮಾಡಲು ಪ್ರಾರಂಭ ಮಾಡಿದ್ದರಿಂದಾಗಿ ಸಾರ್ವಜನಿಕ ಉದ್ಯಮಗಳನ್ನು ಇಂದು ಮುಚ್ಚಲಾಗುತ್ತಿದೆ. ಕಾರ್ಮಿಕರು 150 ದಿನದಿಂದ ಉತ್ಸಹ ಕಳೆದು ಕೊಳ್ಳದೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವುದು ಹೆಮ್ಮೆ ವಿಷಯ ಎಂದು ಅವರು ಹೇಳಿದರು

ಐಟಿಐಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮ್ಮ ಮೂಲಭೂತ ಹಕ್ಕಿನಡಿ ಸಂಘಟನೆ ಮಾಡಿದ್ದಕ್ಕಾಗಿ ಮತ್ತು ಕಾನೂನು ಬದ್ಧವಾದ ಹಕ್ಕುಗಳಿಗಾಗಿ ಒತ್ತಾಯಿಸಿದ್ದಕ್ಕಾಗಿ ಐಟಿಐ ಕಾರ್ಖಾನೆಯ ಆಡಳಿತ ಮಂಡಳಿ ಮಹಿಳೆಯರು ಸೇರಿದಂತೆ ಒಟ್ಟು 80 ಕಾರ್ಮಿಕರಿಗೆ ಕಾನೂನುಬಾಹಿರವಾಗಿ ಉದ್ಯೋಗವನ್ನು ನಿರಾಕರಿಸಿರುವುದು ಖಂಡನೀಯ ಎಂದು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಮತ್ತು ಪ್ರಗತಿಪರ ಚಿಂತಕರಾದ ಬಿ.ಸುರೇಶ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ  ನಗರದಲ್ಲಿ ಮಾತನಾಡಿದ ಅವರು, ಕಾರ್ಮಿಕರ ಧರಣಿ 150 ದಿನ ಪೂರೈಸಿದೆ. 3 ರಿಂದ 30 ವರ್ಷಗಳ ವರೆವಿಗೂ ಹೆಚ್ಚು ಕಾಲ ಕೆಲಸ ಮಾಡಿದ ಕಾರ್ಮಿಕರನ್ನು ಹಠಾತ್ ಕೆಲಸದಿಂದ ವಜಾಗೊಳಿಸಿ ಬೀದಿಪಾಲು ಮಾಡಿದ ಐಟಿಐ ಆಡಳಿತ ಮಂಡಳಿಯ ನಡೆ ಸರಿಯಲ್ಲ. ಕೇಂದ್ರ ಸರಕಾರದ ಪ್ರಾದೇಶಿಕ ಕಾರ್ಮಿಕ ಇಲಾಖೆಯ ಆಯುಕ್ತರ ಮುಂದೆ ನಡೆಯುತ್ತಿರುವ ಸಂಧಾನ ಸಭೆಯಲ್ಲಿ ಕಾರ್ಮಿಕರಿಗೆ ಕೆಲಸ ನೀಡುವುದಾಗಿ ಐಟಿಐ ಆಡಳಿತ ಮಂಡಳಿಯು ಒಪ್ಪಿದ್ದು, ಈಗ ನಕಾರ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. 

ಕಾರ್ಮಿಕರ ಈ ಕೆಟ್ಟ ಪರಿಸ್ಥಿತಿಗೆ 1996 ರಲ್ಲಿ ಸರ್ಕಾರವು ಹೂಡಿಕೆ ಮಾಡುವುದನ್ನು ಹಿಂಪಡೆಯುವ ನೀತಿಯನ್ನು ಜಾರಿ ಮಾಡಲು ಪ್ರಾರಂಭ ಮಾಡಿದ್ದರಿಂದಾಗಿ ಸಾರ್ವಜನಿಕ ಉದ್ಯಮಗಳನ್ನು ಇಂದು ಮುಚ್ಚಲಾಗುತ್ತಿದೆ. ಕಾರ್ಮಿಕರು 150 ದಿನದಿಂದ ಉತ್ಸಹ ಕಳೆದು ಕೊಳ್ಳದೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವುದು ಹೆಮ್ಮೆ ವಿಷಯ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News