×
Ad

ಕೋಮು ವೈಷಮ್ಯ ಹರಡುವ ಕೃತ್ಯದಲ್ಲಿ ಪಾಲ್ಗೊಳ್ಳಬೇಡಿ: ವೈದ್ಯರಿಗೆ ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ನಿಂದ ಸುತ್ತೋಲೆ

Update: 2022-04-29 23:55 IST

ಬೆಂಗಳೂರು: ರಾಜ್ಯದಲ್ಲಿ ಕೋಮು ವೈಷಮ್ಯದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ, ಕರ್ನಾಟಕ ವೈದ್ಯಕೀಯ ಮಂಡಳಿಯು  ಸುತ್ತೋಲೆ ಹೊರಡಿಸಿದ್ದು,  ಅದರಡಿಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಯಾವುದೇ ರೀತಿಯ ಕೋಮು ಸಮಸ್ಯೆಗಳ ಭಾಗವಾಗಿರಬಾರದೆಂದು ಎಚ್ಚರಿಕೆ ನೀಡಿದೆ. 

“ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ವೈಷಮ್ಯ ಹರಡುವಲ್ಲಿ ವೈದ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕರ್ನಾಟಕ ವೈದ್ಯಕೀಯ ಮಂಡಳಿಯ ಗಮನಕ್ಕೆ ಬಂದಿದೆ. ವೈದ್ಯರು ರೋಗಿಗೆ ಅವರ ಜಾತಿ/ಧರ್ಮವನ್ನು ಲೆಕ್ಕಿಸದೆ ಚಿಕಿತ್ಸೆ ನೀಡಬೇಕು ಎಂಬ ಹಿನ್ನೆಲೆಯಲ್ಲಿ, ವೈದ್ಯರು ಕೋಮು ವೈಷಮ್ಯದಲ್ಲಿ ತೊಡಗುವುದು ವೈದ್ಯರ ವೃತ್ತಿಪರ ದುಷ್ಕೃತ್ಯಕ್ಕೆ ಕಾರಣವಾಗುತ್ತದೆ''.

“ವೈದ್ಯಕೀಯ ನೈತಿಕತೆ ಅಥವಾ ವೃತ್ತಿಪರ ನಡವಳಿಕೆಯ ಉಲ್ಲಂಘನೆಗೆ ಒಂದು ಸಣ್ಣ ಅವಕಾಶವೂ ನೀಡದ ರೀತಿಯಲ್ಲಿ ವೈದ್ಯರು ಕೆಲಸ ಮಾಡಬೇಕು. ಆದ್ದರಿಂದ, ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯಕೀಯ ವೃತ್ತಿನಿರತರು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ  ಯಾವುದೇ ಸಮಸ್ಯೆಗಳ ಭಾಗವಾಗಿರಬಾರದು. ಒಂದು ವೇಳೆ ಯಾವುದಾದರೂ ವೈದ್ಯರು, ವೈದ್ಯಕೀಯ ನೀತಿಗಳ ಉಲ್ಲಂಘನೆ ಅಥವಾ ವೃತ್ತಿಪರ ದುರ್ನಡತೆಯ ಬಗ್ಗೆ ಕರ್ನಾಟಕ ವೈದ್ಯಕೀಯ ಮಂಡಳಿ ಗಮನಕ್ಕೆ ಬಂದರೆ ಅಂತಹ ವೈದ್ಯಕೀಯ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸುತ್ತೋಲೆ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News