ತಂಗಿಯ 8 ತಿಂಗಳ ಮಗುವನ್ನು ಗೋಡೆಗೆ ಚಚ್ಚಿ ಕೊಂದ ಅಣ್ಣ

Update: 2022-04-30 09:50 GMT
ಸಾಂದರ್ಭಿಕ ಚಿತ್ರ

ಮೈಸೂರು, ಎ.30: ವಿಪರೀತ ಕುಡಿತದ ಚಟ ಹೊಂದಿರುವ ವ್ಯಕ್ತಿಯೊಬ್ಬ ತನ್ನ ತಂಗಿಯ 8 ತಿಂಗಳ ಮಗುವನ್ನೇ ಗೋಡೆಗೆ ಚಚ್ಚಿ, ಹೊಡೆದು ಕೊಂದಿರುವ ಹೃದಯ ವಿದ್ರಾವಕ ಕೃತ್ಯ ಮೈಸೂರಿನಲ್ಲಿ ಶುಕ್ರವಾರ ನಡೆದಿರುವುದು ವರದಿಯಾಗಿದೆ.

ಮೈಸೂರು ನಗರದ ಕನಕಗಿರಿ 5ನೇ ಕ್ರಾಸ್ ನ ಸಿದ್ದಮ್ಮ ಎಂಬವರ ಪುತ್ರ ರಾಜು(30) ಕೊಲೆ ಆರೋಪಿ. ಈತನ ತಂಗಿ ರಮ್ಯಾ ಅವರ 8 ತಿಂಗಳ ಹೆಣ್ಣು ಮಗು ಕೊಲೆಯಾಗಿದೆ.

 ಗಾರೆ ಕೆಲಸ ಮಾಡುತ್ತಿದ್ದ ರಾಜು ಕುಡಿತದ ಚಟಕ್ಕೆ ದಾಸನಾಗಿದ್ದ. ಕೆಲಸಕ್ಕೆ ಸರಿಯಾಗಿ ಹೋಗದೆ ತನ್ನ ತಾಯಿ ಮತ್ತು ತಂಗಿಯ ಬಳಿ ಹಣಕ್ಕಾಗಿ ಆಗಾಗ ಪೀಡಿಸುತ್ತಿದ್ದ. ಹಣ ಕೊಡದಿದ್ದಾಗ ಮನೆಯಲ್ಲಿದ್ದ ವಸ್ತುಗಳನ್ನು ಬೀದಿಗೆ ಎಸೆದು ಗಲಾಟೆ ಮಾಡುತ್ತಿದ್ದನೆನ್ನಲಾಗಿದೆ. ಅದೇರೀತಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ರಾಜು ತಂಗಿ ರಮ್ಯಾ ಬಳಿ ಹಣ ಕೇಳಿದ್ದಾನೆ. ಅವರು ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ರಾಜು ಮನೆಯಲ್ಲಿದ್ದ ಟಿವಿಯನ್ನು ರಸ್ತೆಗೆ ತಂದು ಹೊಡೆದುಹಾಕಿದ್ದಾನೆ. ಬಳಿಕ ಮನೆಯ ಕೊಠಡಿಯ ಜೋಲಿಯಲ್ಲಿ ನಿದ್ರಿಸುತ್ತಿದ್ದ ಮಗುವನ್ನು ಗೋಡೆಗೆ ಅಪ್ಪಳಿಸಿದ್ದಾನೆ. ತೂಕ ಮಾಡುವ ಯಂತ್ರ ಮತ್ತು  ಬೊಟ್ಟಿನಿಂದ ಮಗುವಿಗೆ ಹೊಡೆದು ಸಾಯಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News