ಕಾಫಿನಾಡಿನ ಪುತ್ರನಿಗೆ ಒಲಿದ ಭೂ ಸೇನೆ ಉಪ ಮುಖ್ಯಸ್ಥರ ಸ್ಥಾನಮಾನ: ರಾಷ್ಟ್ರಮಟ್ಟಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೀರ್ತ

Update: 2022-04-30 18:13 GMT

ಚಿಕ್ಕಮಗಳೂರು, ಎ.30: ಕಾಫಿನಾಡಿನ ಹೆಮ್ಮೆಯ ಪುತ್ರ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಭೂ ಸೇನೆಯ ಉಪ ಮುಖ್ಯಸ್ಥರಾಗಿ ಮೇ 1ರಂದು ಅಧಿಕಾರ ಸ್ವೀಕರಿಸಲಿದ್ದು, ದೇಶ ಮತ್ತು ಕಾಫಿನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಬಿ.ಎಸ್.ಸೋಮಶೇಖರಪ್ಪ ಮತ್ತು ವಿಮಲಾ ದಂಪತಿಯ ಮೂರನೇ ಮಗನಾಗಿ 1984, ಡಿ.15ರಂದು ಜನಿಸಿದ್ದಾರೆ. ರಾಜು ಅವರು ತಂದೆ ಸೋಮಶೇಖರ್ ಇಂಜಿನಿಯರಿಂಗ್ ಶಿಕ್ಷಣ ಪಡೆದು ಪಾಲಿಟೆಕ್ನಿಕ್ ಪಾಂಶುಪಾ ರಾಗಿ ಕಾರ್ಯನಿರ್ವಹಿಸಿದ್ದು, ತಾಯಿ ಗೃಹಿಣಿಯಾಗಿದ್ದರು. ಬಗ್ಗವಳ್ಳಿ ಸೋಮಶೇಖರ್ ರಾಜು 1ನೇ ತರಗತಿಯಿಂದ 6ನೇ ತರಗತಿವರೆಗೂ ಮೈಸೂರಿನಲ್ಲಿ ನಂತರ 6ನೇ ತರಗತಿಯಿಂದ ಬಿಜಾಪುರ ಜಿಲ್ಲೆಯ ಸೈನಿಕ್ ಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಭೂಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸದ್ಯ ಭೂಸೇನೆಯ ಉಪಮುಖ್ಯಸ್ಥರಾಗಿ ನೇಮಕಗೊಳ್ಳುವ ಮೂಲಕ ದೇಶ, ರಾಜ್ಯ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯಲ್ಲಿ ಬಗ್ಗವಳ್ಳಿ ಸೋಮಶೇಖರ್ ರಾಜು ಅವರ ಸಹೋದರ ಸಂಬಂಧಿಗಳು ಇಂದಿಗೂ ವಾಸವಾಗಿದ್ದು, ದೊಡ್ಡಪ್ಪನ ಮಗ ಲೋಕೇಶಪ್ಪ ಹಾಗೂ ಪರಶಿವಪ್ಪ ಅವರು ಅಜ್ಜಂಪುರದಲ್ಲಿ ವಾಸವಾಗಿದ್ದಾರೆ. ಬಗ್ಗವಳ್ಳಿಯಲ್ಲಿ ಸೋಮಶೇಖರ್ ರಾಜು ಅವರು 6 ಎಕರೆ ಅಡಿಕೆ ತೋಟವನ್ನು ಹೊಂದಿದ್ದಾರೆ. ಹುಟ್ಟೂರು ಬಗ್ಗವಳ್ಳಿಯ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರುವ ಸೋಮಶೇಖರ್ ರಾಜು ಅವರು ಗ್ರಾಮದ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪಠ್ಯಪುಸ್ತಕ ವಿತರಣೆ ಮಾಡುವ ಕೈಂಕರ್ಯವನ್ನು ಪ್ರತೀ ವರ್ಷ ಮಾಡಿಕೊಂಡು ಬರುತ್ತಿದ್ದಾರೆ.

ಬಗ್ಗವಳ್ಳಿ ಗ್ರಾಮದ ಬಗ್ಗೆ ಅಪಾರವಾದ ಪ್ರೀತಿ ಕಾಳಜಿಯನ್ನು ಹೊಂದಿರುವ ಅವರು ಆಗಾಗ್ಗೆ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಕಳೆದ ಒಂದು ವಾರದ ಹಿಂದೆ ಗ್ರಾಮಕ್ಕೆ ಬಂದು ಗ್ರಾಮಸ್ಥರು ಮತ್ತು ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿಕೊಂಡು ಹೋ ಗಿದ್ದಾರೆ. ಸೋಮಶೇಖರ್ ರಾಜು ಅವರು ಭೂಸೇನೆ ಉಪಮುಖ್ಯಸ್ಥರಾಗಿ ಉನ್ನತ ಹುದ್ದೆ ಅಲಂಕರಿಸುತ್ತಿರುವುದು ಗ್ರಾಮಸ್ಥರಲ್ಲಿ ಮತ್ತು ಕುಟುಂಬಸ್ಥರಲ್ಲಿ ಸಂತೋಷ ತಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News