ಸಿ.ಟಿ.ರವಿ ಈ ನಾಡಿಗಂಟಿದ ವ್ಯಾದಿ ಇದ್ದಂತೆ: ಶಾಸಕ ದಿನೇಶ್ ಗುಂಡೂರಾವ್
ಬೆಂಗಳೂರು, ಮೇ 1: ‘ಇತ್ತೀಚೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರಿಗೆ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚು ಹಿಡಿದಿದೆ. ಬಹುಶಃ ದೊಡ್ಡವರ ಬಗ್ಗೆ ಮಾತನಾಡಿದರೆ ತಾನು ದೊಡ್ಡವನು ಎಂದು ತೋರಿಸಿಕೊಳ್ಳುವ ಭ್ರಮೆ ಸಿ.ಟಿ.ರವಿ ಅವಗಿರಬಹುದು' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸಿ.ಟಿ.ರವಿ ಅವರು ತನ್ನತನವನ್ನು ಹರಾಜಿಗಿಟ್ಟು ಹಿಂದಿ ಗುಲಾಮಗಿರಿ ಮಾಡುತ್ತಾ, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಸಿ.ಟಿ.ರವಿ ಈ ನಾಡಿಗಂಟಿದ ವ್ಯಾದಿ ಇದ್ದಂತೆ' ಎಂದು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದಿನದ 24 ಗಂಟೆಯೂ ಮೋದಿ ಭಜನೆ ಮಾಡುವ ಭಜನಾ ಮಂಡಳಿಯ ಘನಘೋರ ಸದಸ್ಯ ಸಿ.ಟಿ.ರವಿಯ ಗುಲಾಮಿತನವನ್ನು ನಾಡು ಕಾಣುತ್ತಿದೆ. ಕನ್ನಡಿಗರಾಗಿ ಸ್ವಾಭಿಮಾನದ ಲವಲೇಶವೂ ಇಲ್ಲದ ಸಿ.ಟಿ.ರವಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಬಗ್ಗೆ ಮಾತನಾಡುವುದು ಕುಚೋದ್ಯದ ಸಂಗತಿ. ರವಿ ರಾಜಕೀಯ ಸಭ್ಯತೆ ಕಲಿಯಲಿ, ಒಬ್ಬ ಒಳ್ಳೆ ಹಿಂದೂ ಆಗಬೇಕಾದರೆ ಮೊದಲು ಸಂಸ್ಕøತಿ ಇರಬೇಕು' ಎಂದು ಲೇವಡಿ ಮಾಡಿದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 30, 2022
ಇತ್ತೀಚೆಗೆ @CTRavi_BJP ಯವರಿಗೆ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚು ಹಿಡಿದಿದೆ.
ಬಹುಶಃ ದೊಡ್ಡವರ ಬಗ್ಗೆ ಮಾತನಾಡಿದರೆ ತಾನು ದೊಡ್ಡವನು ಎಂದು ತೋರಿಸಿಕೊಳ್ಳುವ ಭ್ರಮೆ ಸಿ.ಟಿ.ರವಿಗಿರಬಹುದು.
ತನ್ನತನವನ್ನು ಹರಾಜಿಗಿಟ್ಟು ಹಿಂದಿ ಗುಲಾಮಗಿರಿ ಮಾಡುತ್ತಾ, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಸಿ.ಟಿ.ರವಿ ಈ ನಾಡಿಗಂಟಿದ ವ್ಯಾದಿ ಇದ್ದಂತೆ.