ಭಟ್ಕಳದಲ್ಲಿ ಸೋಮವಾರ ಈದುಲ್ ಫಿತ್ರ್
Update: 2022-05-01 22:17 IST
ಭಟ್ಕಳ, ಮೇ 1: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗಿರುವುದ ರಿಂದ ಭಟ್ಕಳದಲ್ಲಿ ಸೋಮವಾರ (ಮೇ 2) ಈದುಲ್ ಫಿತ್ರ್ ಆಚರಿಸಲು ಜಮಾಅತುಲ್ ಮುಸ್ಲಿಮೀನ್ ಇದರ ಪ್ರಧಾನ ಖಾಝಿ ಮೌಲನಾ ಅಬ್ದುಲ್ ರಬ್ ಖತಿಬಿ ನದ್ವಿ ಹಾಗು ಖಲೀಫ ಜಮಾಅತುಲ್ ಮುಸ್ಲಿಮೀನ್ ಇದರ ಪ್ರಧಾನ ಖಾಝಿ ಮೌಲನಾ ಖ್ವಾಜ ಮುಹಿಯುದ್ದೀನ್ ಅಕ್ರಮಿ ನದ್ವಿ ಇವರು ಜಂಟಿಯಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.