ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ. ರಾಜಶೇಖರ ಮನಸೂರ ನಿಧನ
Update: 2022-05-01 23:22 IST
ಧಾರವಾಡ: ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ. ರಾಜಶೇಖರ ಮನಸೂರ ನಿಧನಧಾರವಾಡ: ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ. ರಾಜಶೇಖರ ಮನಸೂರ (79) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು.
ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಪಂ. ಮಲ್ಲಿಕಾರ್ಜುನ ಮನಸೂರ ಅವರ ಪುತ್ರ ಡಾ. ರಾಜಶೇಖರ ಮನಸೂರ ಅವರು ಜೈಪುರ ಪತ್ರೋಳಿ ಘರಾಣೆ ಸಂಗೀತದ ಮೇರು ಗಾಯಕರಾಗಿದ್ದರು. ಇಂಗ್ಲೆಂಡ್‌ನಲ್ಲಿ ಶಿಕ್ಷಣ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.