×
Ad

ಈಗಲೂ ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಇರುತ್ತೇನೆ: ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ

Update: 2022-05-02 12:55 IST
 ಎಂಟಿಬಿ ನಾಗರಾಜ್

ಬೆಂಗಳೂರು: ಪಕ್ಷಾಂತರದ ಬಗೆಗಿನ ನನ್ನ ಹೇಳಿಕೆ ನೈತಿಕ ಮತ್ತು ಸೈದ್ಧಾಂತಿಕವಾದದ್ದು, ಯಾರೇ ಆಗಲಿ ಪಕ್ಷಾಂತರ ಮಾಡುವುದು ತಪ್ಪು ಎನ್ನುವ ಅರ್ಥದಲ್ಲಿ  ಮಾತನಾಡಿದ್ದೇನೆಯೇ ಹೊರತು ಬಿಜೆಪಿ ಬಗ್ಗೆ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ .ನಾನು,ಬಿಜೆಪಿಗೆ ಬಂದಿರುವುದನ್ನು ತಪ್ಪು ಎಂದು ಭಾವಿಸಿಯೂ ಇಲ್ಲ. ಹೇಳಿಯೂ ಇಲ್ಲ ಎಂದು ಪೌರಾಡಳಿತ,ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ನನ್ನ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಮಾಡಿರುವ ಒಂದೇ ತಪ್ಪೆಂದರೆ ಅದು ಪಕ್ಷಾಂತರ ಮಾಡಿದ್ದು" - *ಈ ಹೇಳಿಕೆ ನೈತಿಕವಾದದ್ದು ಮತ್ತು ಸೈದ್ಧಾಂತಿಕವಾದದ್ದು*, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಈಗಲೂ ಬಿಜೆಪಿಯಲ್ಲಿದ್ದೇನೆ.ಮುಂದೆಯೂ ಇರುತ್ತೇನೆ ಎಂದು ತಿಳಿಸಿದ್ದಾರೆ.

'ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ, ಪಕ್ಷ ಮತ್ತು ನಾಯಕರು ನನ್ನನ್ನು ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದಾರೆ' ಎಂದು ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News