ಲೂಟಿಕೋರರೆಲ್ಲ ಮಂತ್ರಿಗಳಾಗಿರುವಾಗ, ಕಳ್ಳರೆಲ್ಲ ಪೊಲೀಸರಾಗುತ್ತಿದ್ದಾರೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ
Update: 2022-05-02 14:19 IST
ಬೆಂಗಳೂರು: ಪಿಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದು, ಸಚಿವರು ಎರಡೂ ಪಕ್ಷದ ಟ್ವಿಟರ್ ಖಾತೆಗಳಿಂದ ಸರಣಿ ಟ್ವೀಟ್‌ಗಳನ್ನು ಮಾಡಲಾಗುತ್ತಿದೆ.
ಈ ಕುರಿತು ಸಫಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಲೂಟಿಕೊರರೆಲ್ಲ ಬಿಜೆಪಿ ಸರ್ಕಾರದ ಮಂತ್ರಿಗಳಾಗಿರುವಾಗ, ಕಳ್ಳರಾದವರೆಲ್ಲ ಪೊಲೀಸರಾಗುತ್ತಿದ್ದಾರೆ' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
'ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನಾಚಾರಗಳು ಉತ್ತುಂಗಕ್ಕೆ ತಲುಪಿರುವ ಪರಿಣಾಮ ರಾಜ್ಯದಲ್ಲಿ ಭ್ರಷ್ಟರು, ಕಳ್ಳರು ಕಾನೂನು ಪಾಲಕರಾಗುತ್ತಿದ್ದಾರೆ' ಎಂದು ಟೀಕಿಸಿದೆ.
'ಕಳ್ಳರನ್ನೇ ಪೊಲೀಸರನ್ನಾಗಿ ಆಯ್ಕೆ ಮಾಡಿದರೆ ಲೂಟಿಯೇ ಕಾನೂನುಬದ್ಧ ಆಗುವುದು ನಿಶ್ಚಿತ' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Koo Appಲೂಟಿಕೊರರೆಲ್ಲ ಬಿಜೆಪಿ ಸರ್ಕಾರದ ಮಂತ್ರಿಗಳಾಗಿರುವಾಗ, ಕಳ್ಳರಾದವರೆಲ್ಲ ಪೊಲೀಸರಾಗುತ್ತಿದ್ದಾರೆ! ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನಾಚಾರಗಳು ಉತ್ತುಂಗಕ್ಕೆ ತಲುಪಿರುವ ಪರಿಣಾಮ ರಾಜ್ಯದಲ್ಲಿ ಭ್ರಷ್ಟರು, ಕಳ್ಳರು ಕಾನೂನು ಪಾಲಕರಾಗುತ್ತಿದ್ದಾರೆ. ಕಳ್ಳರನ್ನೇ ಪೊಲೀಸರನ್ನಾಗಿ ಆಯ್ಕೆ ಮಾಡಿದರೆ ಲೂಟಿಯೇ ಕಾನೂನುಬದ್ಧ ಆಗುವುದು ನಿಶ್ಚಿತ. - ಕರ್ನಾಟಕ ಕಾಂಗ್ರೆಸ್ (@inckarnataka) 2 May 2022