ಪಿಎಸ್ ಐ ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿ: ಕಾಂಗ್ರೆಸ್ ಆರೋಪ
Update: 2022-05-02 16:38 IST
ಬೆಂಗಳೂರು: PSI ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಸೋಮವಾರ ಕೂ ಮಾಡಿರುವ ಕಾಂಗ್ರೆಸ್, ಪಿಎಸ್ ಐ ಅಭ್ಯರ್ಥಿಯಿಂದ ದರ್ಶನ್ ಗೌಡ ಎಂಬ ವ್ಯಕ್ತಿ 80 ಲಕ್ಷ ಪಡೆದಿದ್ದು ಬೆಳಕಿಗೆ ಬಂದಿದೆ, ಆತನನ್ನು ವಿಚಾರಣೆಯಿಂದ ರಕ್ಷಿಸಲಾಗಿದೆ. ಕಾರಣ, ಆತ ಮಂತ್ರಿಯೊಬ್ಬರ ಸಂಬಂಧಿ. ಸಚಿವ ಅಶ್ವತ್ಥ್ ನಾರಾಯಣ ಅವರೇ, ಈ ಬಗ್ಗೆ ತಮಗೆ ಹೆಚ್ಚು ತಿಳಿದಿದೆಯಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Koo AppPSI ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. PSI ಅಭ್ಯರ್ಥಿಯಿಂದ ದರ್ಶನ್ ಗೌಡ ಎಂಬ ವ್ಯಕ್ತಿ 80 ಲಕ್ಷ ಪಡೆದಿದ್ದು ಬೆಳಕಿಗೆ ಬಂದಿದೆ, ಆತನನ್ನು ವಿಚಾರಣೆಯಿಂದ ರಕ್ಷಿಸಲಾಗಿದೆ. ಕಾರಣ, ಆತ ಮಂತ್ರಿಯೊಬ್ಬರ ಸಂಬಂಧಿ. @drashwathnarayan ಅವರೇ, ಈ ಬಗ್ಗೆ ತಮಗೆ ಹೆಚ್ಚು ತಿಳಿದಿದೆಯಲ್ಲವೇ?? - ಕರ್ನಾಟಕ ಕಾಂಗ್ರೆಸ್ (@inckarnataka) 2 May 2022