×
Ad

ಕೊರಟಗೆರೆ | ಎಸಿಬಿ ಕಾರ್ಯಾಚರಣೆ: ಗ್ರಾಮ ಪಂಚಾಯತ್ ಕಾರ್ಯದರ್ಶಿ ಬಲೆಗೆ

Update: 2022-05-04 17:58 IST
ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ

ಕೊರಟಗೆರೆ, ಮೇ.4 : ಲಂಚ ಪಡೆಯುವ ವೇಳೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯೋರ್ವನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಲಿ ನಿವೇಶನದ ಈ ಸ್ವತ್ತು ಮಾಡಿಸಿ ಕೊಳ್ಳಲು  ಅರುಣ್ ಕುಮಾರ್ ಎಂಬವರು ಅರ್ಜಿ ನೀಡಿದ್ದು, ಪಂಚಾಯತ್ ಕಾರ್ಯದರ್ಶಿ ಶ್ರೀಧರ್ 7500 ಲಂಚಕ್ಕೆ  ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ.  3000 ಹಣ ಮುಂಗಡವಾಗಿ ಪಡೆದು ಉಳಿದ 4500 ರೂ. ಬುಧವಾರ (ಇಂದು) ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. 

ಕಾರ್ಯಾಚರಣೆ ವೇಳೆ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ಇನ್ಸ್ ಪೆಕ್ಟರ್ ವಿರೇಂದ್ರ ವಿಜಯಲಕ್ಷ್ಮಿ ನರಸಿಂಹರಾಜು ಚಂದ್ರು ಶಿವಣ್ಣ  ನವೀನ್ ಕುಮಾರ್ ಸುರೇಶ್ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News