×
Ad

ಕಲಬುರಗಿಯಲ್ಲಿ ಸೌಹಾರ್ದ ಬಸವ, ಈದ್, ಅಂಬೇಡ್ಕರ್ ಜಯಂತಿ ಆಚರಣೆ

Update: 2022-05-04 19:17 IST

ಕಲಬುರಗಿ:  ಶಾಂತಿ, ಸಮತೆ, ಸೌಹಾರ್ದತೆ ನೆಲೆಸಲಿ, ಪ್ರೀತಿ, ವಿಶ್ವಾಸ ವೃದ್ದಿಸುವ ನಿಟ್ಟಿನಲ್ಲಿ ಇಲ್ಲಿನ ಸೌಹಾರ್ದ ಕರ್ನಾಟಕ ಸಂಘಟನೆ ವತಿಯಿಂದ ನಗರದ ಬಸವೇಶ್ವರ ಪುತ್ಥಳಿ ಬಳಿ ಬುಧವಾರ ಸೌಹಾರ್ದ ಬಸವ, ಈದ್ ಹಾಗೂ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಚುನಾವಣೆ ದೃಷ್ಟಿ ಇಟ್ಟುಕೊಂಡು ಪ್ರಭುತ್ವ ಪೇರಿತ ಜಯಂತಿ ವೈಭವದ ರೀತಿಯಲ್ಲಿ ಆಚರಣೆಗಳಲ್ಲಿ ಮುಳುಗದೆ ನಿಜವಾದ ಅರ್ಥದಲ್ಲಿ ಆಚರಿಸುವಂತಾಗಬೇಕು ಎಂದು ಆಗಮಿಸಿದ ಗಣ್ಯರು ಅಭಿಪ್ರಾಯಪಟ್ಟರು.

ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸುವ ಆಚರಣೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ. ಸ್ವಾರ್ಥದ ಉದ್ದೇಶವಿಟ್ಟುಕೊಂಡು ಮಹನೀಯರ ಆಚರಣೆ ಸಲ್ಲದು ಎಂದು ತಿಳಿ ಹೇಳಿದರು.

ಪಾಧರ್ ವಿಕ್ಟರ್, ಸಂಗಾನಂದ ಭಂತೇಜಿ,  ಕೋರಣೇಶ್ವರ ಸ್ವಾಮೀಜಿ, ಕೆ. ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ, ಮೆಹರಾಜ್ ಪಟೇಲ್, ಮಹಾಂತೇಶ ಕಲ್ಬುರ್ಗಿ, ರವೀಂದ್ರ ಶಾಬಾದಿ, ಡಾ. ಶಿವರಂಜನ ಸತ್ಯಂಪೇಟೆ, ಭೀಮಣ್ಣ ಬೋನಾಳ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News