ಮಮತಾ ವಿರುದ್ಧ ಕೇಸು ಹಾಕಿದ ಕಾಂಗ್ರೆಸ್, ಪರವಾಗಿ ವಾದ ಮಂಡಿಸಿದ ಚಿದಂಬರಂ !

Update: 2022-05-05 04:49 GMT

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಪಿ ಚಿದಂಬರಂ ಅವರು ಬಂಗಾಳ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಾಗ  ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಕೀಲರು ಮತ್ತು ಪಕ್ಷದ ಬೆಂಬಲಿಗರಿಂದ ಪ್ರತಿಭಟನೆಯನ್ನು ಎದುರಿಸಬೇಕಾದ ವಿದ್ಯಾಮಾನ ನಡೆಯಿತು.

ಪ್ರಶ್ನಾರ್ಹ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ಚೌಧರಿ ಅವರು ಪ್ರಾರಂಭಿಸಿದರು. ಅವರು ತೃಣಮೂಲ ಕಾಂಗ್ರೆಸ್ ಸರ್ಕಾರವು ಮೆಟ್ರೋ ಡೈರಿ ಷೇರುಗಳನ್ನು ಕೃಷಿ-ಸಂಸ್ಕರಣಾ ಸಂಸ್ಥೆ ಕೆವೆಂಟರ್‌ಗೆ ಮಾರಾಟ ಮಾಡುವ ವಿಚಾರವನ್ನು ಪ್ರಶ್ನಿಸಿದರು. ಈ ವೇಳೆ ಬಂಗಾಳ ಸರಕಾರದ ನಡೆಯನ್ನು ಸಮರ್ಥಿಸಿದ ಚಿದಂಬರಂ ಕುರಿತು ಕಾಂಗ್ರೆಸ್ ಬೆಂಬಲದ ವಕೀಲರು "ಪಕ್ಷದ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ" ಎಂದು ಆರೋಪಿಸಿದರು.

ಅಲ್ಲಿ ಸೆರೆಹಿಡಿದ ವೀಡಿಯೊದಲ್ಲಿ ಚಿದಂಬರಂರನ್ನು ಹಿಂಬಾಲಿಸುವ ವಕೀಲರನ್ನು ತೋರಿಸಲಾಗಿದ್ದು, ಕಾಂಗ್ರೆಸ್‌ನ ಅವನತಿಗೆ "ಈ ರೀತಿಯ ನಾಯಕತ್ವವೇ ಜವಾಬ್ದಾರಿಯಾಗಿದೆ ಎಂದು ಟೀಕಿಸಿದ್ದಾರೆ. ಚಿದಂಬರಂ ಗೋ ಬ್ಯಾಕ್‌ ಎಂಬ ಘೋಷಣೆಗಳೂ ಮೊಳಗಿದವು.

ಮಮತಾ ಬ್ಯಾನರ್ಜಿಯವರ ಪ್ರಮುಖ ರಾಜಕೀಯ ವೈರಿಯಾದ ಅಧೀರ್‌ ರಂಜನ್‌ ಚೌಧರಿಯವರು ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಡಿಮೆ ಬೆಲೆಗೆ ಮಾರಾಟ ಕುದುರಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಖಾಸಗಿ ಸಂಸ್ಥೆಯನ್ನು ಚಿದಂಬರಂ ಪ್ರತಿನಿಧಿಸುತ್ತಿದ್ದರು. 

ಈ ಮಾರಾಟವು ರಾಜ್ಯದ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು  ಚೌಧರಿ ಅವರ ವಕೀಲ ಬಿಕಾಶ್ ಭಟ್ಟಾಚಾರ್ಯ ಹೇಳಿದ್ದಾರೆ. ಕೆವೆಂಟರ್, ಅವರು ಈಗಾಗಲೇ ಷೇರುಗಳ ಒಂದು ಭಾಗವನ್ನು ಸಿಂಗಾಪುರ ಮೂಲದ ಕಂಪನಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದೂ ಅವರು ಈ ವೇಳೆ ಹೇಳಿದರು.

"ಇದು ಸ್ವತಂತ್ರ ದೇಶ. ನನಗೆ ಏನೂ ಹೇಳಲಿಕ್ಕಿಲ್ಲ. ನಾನು ಇದರ ಬಗ್ಗೆ ಏಕೆ ಪ್ರತಿಕ್ರಿಯಿಸಬೇಕು?" ಎಂದು ಚಿದಂಬರಂ ಪಿಟಿಐಗೆ ತಿಳಿಸಿದ್ದಾರೆ. ಪ್ರತಿಭಟನೆಯು ಕಾಂಗ್ರೆಸ್ ಬೆಂಬಲಿಗರ "ನೈಸರ್ಗಿಕ ಪ್ರತಿಕ್ರಿಯೆ" ಎಂದು ಅಧೀರ್ ಚೌಧರಿ ಹೇಳಿದರು.

ಆದಾಗ್ಯೂ, ಯಾವುದೇ ಕಕ್ಷಿದಾರರನ್ನು ಪ್ರತಿನಿಧಿಸಲು ವಕೀಲರಾಗಿ ಚಿದಂಬರಂ ಅವರಿಗಿರುವ ಹಕ್ಕನ್ನು ಅವರು ಒಪ್ಪಿಕೊಂಡರು. "ಇದೊಂದು ವೃತ್ತಿಪರ ಜಗತ್ತು. ಅದು ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ... ಯಾರೂ ಅವನಿಗೆ ಅಥವಾ ಅವಳಿಗೆ ಏನು ಮಾಡಬೇಕೆಂದು ನಿರ್ದೇಶಿಸಲು ಸಾಧ್ಯವಿಲ್ಲ" ಎಂದು ಅವರು ಪಿಟಿಐಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News