ಚೋಟಾ ಪಾಕಿಸ್ತಾನ ಎಂದು ಘೋಷಣೆ ಪ್ರಕರಣ: ಮೈಸೂರು ಎಸ್‌ಪಿ ಹೇಳಿದ್ದೇನು?
Update: 2022-05-06 11:33 IST
ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆಯನ್ನು ಚೋಟಾ ಪಾಕಿಸ್ತಾನ ಎಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಮೈಸೂರು ಎಸ್‌ಪಿ ಆರ್.ಚೇತನ್ ಹೇಳಿದ್ದಾರೆ.
'ಕವಲಂದೆಯನ್ನು ಚೋಟಾ ಪಾಕಿಸ್ತಾನ ಎಂದು ಘೋಷಣೆ ಕೇಸ್. ವೈರಲ್ ಆದ ವಿಡಿಯೋದಲ್ಲಿ ಆಕ್ಷೇಪಾರ್ಹ ಹೇಳಿಕೆ ಇದೆ' ಎಂದು ಹೇಳಿದ್ದಾರೆ.
ಐಪಿಸಿ ಸೆಕ್ಷನ್ 153-A, 153-B, 505-2, 34ಅಡಿ ಕೇಸ್ ದಾಖಲಿಸಲಾಗಿದೆ. ಚೋಟಾ ಪಾಕಿಸ್ತಾನ ಎಂದ ವ್ಯಕ್ತಿಯನ್ನು ಪತ್ತೆ ಹಚ್ಚುತ್ತಿದ್ದೇವೆ ಅಂತಾ ಮೈಸೂರು ಎಸ್‌ಪಿ ಆರ್.ಚೇತನ್ ಹೇಳಿದ್ದಾರೆ.