×
Ad

ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಸರ್ಕಾರ ಬೇರು ಮಟ್ಟದ ತನಿಖೆ ನಡೆಸುತ್ತಿದೆ; ಸಚಿವ ಆರಗ ಜ್ಞಾನೇಂದ್ರ

Update: 2022-05-06 11:44 IST
ಸಚಿವ ಆರಗ ಜ್ಞಾನೇಂದ್ರ

ಕಲಬುರಗಿ: PSI ನೇಮಕಾತಿ ಹಗರಣ ಸಂಬಂಧ ಸರ್ಕಾರ ಬೇರು ಮಟ್ಟದ ತನಿಖೆ ನಡೆಸುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಕಾಂಗ್ರೆಸ್‌ನವರು ಸರಕಾರದ ಕೆಲ ಸಚಿವರ ತೇಜೋವಧೆ ಮಾಡುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ಹಗರಣ ಮಾಡುವವರು ಭವಿಷ್ಯದಲ್ಲಿ ‌ಮುಟ್ಟಿ ನೋಡಿಕೊಳ್ಳುವಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

'ನಿರಾಧಾರವಾಗಿ ಆರೋಪ ಮಾಡೋದು, ದಾಖಲಾತಿ ಕೇಳಿದರೆ, ಓಡಿಹೋಗೋದು ಕಾಂಗ್ರೆಸ್ ಕೆಲಸ. ಪ್ರಕರಣದಲ್ಲಿ ಸಿಲುಕಿದವರು ಬಹುತೇಕ ಕಾಂಗ್ರೆಸ್​ನವರೇ' ಎಂದು ಆರೋಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News