ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ: 33 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು

Update: 2022-05-06 13:26 GMT

ಬೆಂಗಳೂರು, ಮೇ 6: 2021-22ನೇ ಸಾಲಿನ ದ್ವಿತೀಯ ಪಿಯುಸಿಯ ಇಂಗ್ಲಿಷ್ ಭಾಷೆಯ ಪರೀಕ್ಷೆ ಶುಕ್ರವಾರ ನಡೆದಿದ್ದು, ಒಟ್ಟು 33,782 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. 

ಇಂಗ್ಲಿಷ್ ಭಾಷೆಯಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದ 5,82,735 ವಿದ್ಯಾರ್ಥಿಗಳ ಪೈಕಿ, 24,774 ವಿದ್ಯಾರ್ಥಿಗಳು, ಮರುಪರೀಕ್ಷೆ ತೆಗೆದುಕೊಂಡಿದ್ದ 28,220 ವಿದ್ಯಾರ್ಥಿಗಳ ಪೈಕಿ 6646 ವಿದ್ಯಾರ್ಥಿಗಳು ಹಾಗೂ ಖಾಸಗಿಯಾಗಿ ನೋಂದಣಿಯಾಗಿದ್ದ 21,247 ವಿದ್ಯಾರ್ಥಿಗಳ ಪೈಕಿ 2362 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. 

ಬೆಂಗಳೂರು ನಗರ 2288, ತುಮಕೂರು 1811, ಮೈಸೂರು 1341, ರಾಯಚೂರು 1181, ಚಿತ್ರದುರ್ಗ ಜಿಲ್ಲೆಯಲ್ಲಿ 1165 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News