ಮೂಡಿಗೆರೆ | ಕಾರುಗಳ ಮಧ್ಯೆ ಅಪಘಾತ: ಸ್ಥಳದಲ್ಲೇ ಓರ್ವ ಮೃತ್ಯು

Update: 2022-05-06 14:44 GMT

ಮೂಡಿಗೆರೆ : ತಾಲೂಕಿನ ಗಾಂಧಿಘರ್ ಬಳಿ ಕಾರುಗಳು ಪರಸ್ಫರ ಡಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. 

ಮೃತರನ್ನು ತಾಲೂಕಿನ ಬೆಟ್ಟದಮನೆಯ ಬಿ.ಕೆ.ಲಕ್ಷ್ಮಣ್ ಗೌಡ,(65) ಎಂದು ಗುರುತಿಸಲಾಗಿದೆ.

ಮಗನಿಗೆ ಹೊಸ ಸ್ಕೂಟಿಯನ್ನು ಕೊಡಿಸಿದ ಲಕ್ಷ್ಮಣಗೌಡ ಹೊಸ ವಾಹನದ ಪೂಜೆಗೆಂದು ಬೆಟ್ಟದ ಮನೆ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ .

ಗೋಣಿಬೀಡು ಕಡೆಯಿಂದ ವೇಗವಾಗಿ ಬಂದ ಇನ್ನೊಂದು ವಾಹನ ಇವರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅದರಲ್ಲಿದ್ದ  ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News