×
Ad

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಇಬ್ಬರು ಮಹಿಳಾ ಅಧಿಕಾರಿಗಳು

Update: 2022-05-06 20:54 IST
    ಹೇಮಲತಾ |      ಪ್ರಿಯಾಂಕ

ಬೆಂಗಳೂರು, ಮೇ 6: ವಾಣಿಜ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಆಯುಕ್ತೆ ಪ್ರಿಯಾಂಕ ಜೆ.ಸಿ. ಹಾಗೂ ಮಂಡ್ಯ ಜಿಲ್ಲೆಯ ಪರಿಸರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೇಮಲತಾ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. 

ಪ್ರಿಯಾಂಕ ಅವರು ಮಂಜುನಾಥ್ ಎಂಬ ಎಲೆಕ್ಟ್ರಿಕಲ್ ಹಾಗೂ ಹಾರ್ಡ್‍ವೇರ್ ಉದ್ಯಮಿಗೆ ಜಿಎಸ್‍ಟಿ ಸರ್ಟಿಫಿಕೇಟ್ ನೀಡಲು 10 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟು, 3 ಸಾವಿರ ರೂ.ಗಳನ್ನು ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್ ತೆರೆಯಲು ಎನ್.ಓ.ಸಿ. ನೀಡುವುದಕ್ಕಾಗಿ ಹೇಮಲತಾ ಅವರು 30 ಸಾವಿರ ರೂ.ಗಳ ಬೇಡಿಕೆಯನ್ನು ಇಟ್ಟಿದ್ದು, 15 ಸಾವಿರ ಮುಂಗಡ ಹಣವನ್ನು ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ ಎಂದು ಪ್ರಕಟನೆಯಲ್ಲಿ ಎಸಿಬಿ ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News