×
Ad

VIDEO- ಮೋದಿ, ಅಮಿತ್‌ ಶಾ, ಭಾಗವತ್‌ ಹಣ ಕೇಳಿದ್ದರೇ ಎಂದು ಶಾಸಕ ಯತ್ನಾಳ್‌ ಸ್ಪಷ್ಟಪಡಿಸಬೇಕು: ಬಿಕೆ ಹರಿಪ್ರಸಾದ್

Update: 2022-05-07 00:06 IST

ಬೆಂಗಳೂರು:  'ಸಿಎಂ ಸ್ಥಾನಕ್ಕಾಗಿ ಎರಡೂವರೆ ಸಾವಿರ ಕೋಟಿ ಕೇಳಿರುವುದು ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತದ್ದು ಮಾತ್ರವಲ್ಲ, ಜೊತೆಗೆ ಇದು ಸಂವಿಧಾನ, ಪ್ರಜಾಪ್ರಭುತ್ವ ಗಾಳಿಗೆ ತೂರಿ ಬಿಜೆಪಿಯವರು ಹಣದ ಮೇಲೆ ರಾಜಕಾರಣ ಮಾಡ್ತಿರೋದು ಸ್ಪಷ್ಟವಾಗಿ ಕಾಣ್ತಿದೆ' ಎಂದುವಿಧಾನಪರಿಷತ್ ವಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಅವರು ಹೇಳಿದ್ದಾರೆ. 

ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿರಿಯ ಶಾಸಕರು ಹಾಗೂ ಕೇಂದ್ರದಲ್ಲಿ ಮಂತ್ರಿಯಾಗಿದ್ದಂತವರು ಈಗ ಅವರು ನೀಡಿರುವ ಹೇಳಿಕೆ ಬೇಜಾಬ್ದಾರಿ ಹೇಳಿಕೆಯಲ್ಲ, ಅದು ಜವಾಬ್ದಾರಿಯುತವಾಗಿ ನೀಡಿರುವ ಹೇಳಿಕೆ. ಮೋದಿ, ಅಮಿತ್‌ ಶಾ, ಭಾಗವತ್‌ ಹಣ ಕೇಳಿದ್ದರೇ ಎಂದು ಶಾಸಕ ಯತ್ನಾಳ್‌ ಸ್ಪಷ್ಟಪಡಿಸಬೇಕು ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಅಮಿತ್ ಶಾ ಈ ಹಿಂದೆ ಚುನಾವಣೆಗಳು ನಮಗೆ ವ್ಯವಹಾರ ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕವಾಗಿ ಯತ್ನಾಳ್ ಅವರಿಗೆ ಎರಡುವರೆ ಸಾವಿರ ಕೋಟಿ ಹಣ ಕೇಂದ್ರದ ನಾಯಕರು ಕೇಳಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News