ಪಿಎಸ್ಐ ಅಕ್ರಮ ಪ್ರಕರಣ : ಅಮಾನತುಗೊಂಡವರ ಸಂಖ್ಯೆ 13ಕ್ಕೆ ಏರಿಕೆ

Update: 2022-05-07 06:44 GMT

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದಡಿ 11 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಅಮಾನತುಗೊಂಡವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಎಂ.ಎಸ್. ಇರಾನಿ ಕಾಲೇಜು ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭದ್ರತಾ ಕೆಲಸಕ್ಕಾಗಿ ಈ 11 ಮಂದಿ ಸಿಬ್ಬಂದಿ ನಿಯೋಜನೆಗೊಂಡಿದ್ದರು ಎಂದು ತಿಳಿದುಬಂದಿದೆ.

ಇದರಲ್ಲಿ ಇಬ್ಬರು ಎಎಸ್ಐ ಹಾಗೂ 9 ಜನ ಕಾನ್​ಸ್ಟೇಬಲ್​​ ಗಳನ್ನು ಅಮಾನತು ಮಾಡಲಾಗಿದ್ದು, ಈ ಮೂಲಕ ಈವರೆಗೆ ಅಮಾನತುಗೊಂಡವರ ಸಂಖ್ಯೆ 13ಕ್ಕೆ ಏರಿದೆ. ಈಗಾಗಲೇ ಡಿವೈಎಸ್​ಪಿ ಮತ್ತು ಸಿಪಿಐ ಅವರನ್ನು ಅಮಾನತುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News