ಪೆರೋಲ್‍ಗೆ ಪ್ರಮಾಣ ಪತ್ರ: ವೈದ್ಯರ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ

Update: 2022-05-07 17:29 GMT

ಬೆಂಗಳೂರು, ಮೇ 7: ಬೆನ್ನುಮೂಳೆಯ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ನನ್ನ ತಾಯಿಯನ್ನು ಕೆಲ ದಿನ ಆರೈಕೆ ಮಾಡಲು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದ ಕೈದಿಯೊಬ್ಬರ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ ಹಾಗೂ ವೈದ್ಯರ ವಿರುದ್ಧ ತನಿಖೆ ನಡೆಸುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ ನಿರ್ದೇಶಿಸಿದೆ. 

ಇದೇ ವೇಳೆ, ಕೈದಿಯ ತಾಯಿ ಸ್ಪಾಂಡಿಲೈಟಿಸ್(ಬೆನ್ನುಮೂಳೆಯ ಕಾಯಿಲೆ)ನಿಂದ ನರಳುತ್ತಿದ್ದು ಅವರನ್ನು ಖುದ್ದು ಆರೈಕೆ ಮಾಡಲು 2 ರಿಂದ 3 ವಾರಗಳ ಕಾಲ ಪೆರೋಲ್ ಮೇಲೆ ಬಿಡುಗಡೆಗೆ ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿ ಪ್ರಮಾಣ ಪತ್ರ ನೀಡಿದ್ದ ವೈದ್ಯರ ವಿರುದ್ಧ ಸೂಕ್ತ ವಿಚಾರಣೆ ನಡೆಸುವಂತೆ ನ್ಯಾಯಪೀಠವು ವೈದ್ಯಕೀಯ ಮಂಡಳಿಗೆ ಆದೇಶಿಸಿದೆ.

ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣದಲ್ಲಿ ವಾಸುದೇವ(37) ಪ್ರಮುಖ ಆರೋಪಿಯಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಅರ್ಜಿ ವಿಚಾರಣೆ ವೇಳೆ ಸರಕಾರದ ಪರ ವಕೀಲ ಎಂ.ವಿನೋದ್ ಕುಮಾರ್, ಅರ್ಜಿದಾರ ಆರೋಪಿಗೆ ‘ಲೈಫ್ ಕೇರ್ ಆಸ್ಪತ್ರೆ’ ನಿರ್ವಾಹಕ ನಿರ್ದೇಶಕರು ನೀಡಿದ್ದ ಶಿಫಾರಸು ಪತ್ರವನ್ನು ಆಕ್ಷೇಪಿಸಿ, ಪೆರೋಲ್ ನೀಡದಂತೆ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News