×
Ad

ಕಲಬುರಗಿ: ಪೊಲೀಸ್ ವರಿಷ್ಠಾಧಿಕಾರಿ ಮನೆಯಲ್ಲಿ ಎರಡು ಹಾವುಗಳು ಪತ್ತೆ

Update: 2022-05-08 12:06 IST

ಕಲಬುರಗಿ, ಮೇ 8: ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರ ಸರಕಾರಿ ನಿವಾಸದ ಆವರಣದೊಳಗೆ ಇಂದು ಬೆಳಗ್ಗೆ ಎರಡು ಭಾರೀ ಗಾತ್ರದ ಹಾವುಗಳು ಪತ್ತೆಯಾಗಿವೆ.

 ಇಲ್ಲಿನ ಪೊಲೀಸ್ ಭವನದ ಬಳಿ ಇರುವ ಸರ್ಕಾರಿ ನಿವಾಸದ ಆವರಣದಲ್ಲಿ ಇಂದು ಬೆಳಗ್ಗೆ ಇಶಾ ಪಂತ್ ಬೆಳಗಿನ ವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಹಾವನ್ನು ಅವರು ಗಮನಿಸಿದ್ದಾರೆ. ಕೂಡಲೇ ಸಿಬ್ಬಂದಿ ‌ಮೂಲಕ ಉರಗ ರಕ್ಷಕ ಪ್ರಶಾಂತ ಪಾಟೀಲ ಅವರಿಗೆ ಕರೆ ಮಾಡಿಸಿದ್ದಾರೆ. ಅದರಂತೆ ಆಗಮಿಸಿದ ಪ್ರಶಾಂತ್ ಹಾವುಗಳನ್ನು ಹಿಡಿದರು. ಅವೆರಡು ವಿಷಕಾರಿಯಲ್ಲದ ಕೆರೆ ಹಾವು (ಇಂಡಿಯನ್ ರ್ಯಾಟ್ ಸ್ನೇಕ್)ಗಳಾಗಿದ್ದವು. ಸುಮಾರು ಏಳು ಅಡಿ ಗಾತ್ರವಿದ್ದವು. ವಿಷಕಾರಿಯಲ್ಲವೆಂದು ತಿಳಿದ ಎಸ್ಪಿ ಇಶಾ ಹಾವುಗಳನ್ನು ಹಿಡಿದು‌ ಖುಷಿಪಟ್ಟರು. ನಂತರ ಅವುಗಳನ್ನು ಪ್ರಶಾಂತ ಪಾಟೀಲ ಊರ ಹೊರಭಾಗದಲ್ಲಿ ಬಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News