×
Ad

ಹನೂರು: ಅಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

Update: 2022-05-08 17:56 IST

ಹನೂರು : ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ  ತಡರಾತ್ರಿ ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆಯಾಗಿ, ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಜರುಗಿದೆ.

ಹಬೂರು ತಾಲೂಕಿನ ಕೂಡ್ಲೂರು  ಗ್ರಾಮದ 22 ವರ್ಷದ ಪಲ್ಲವಿ  ಎಂಬಾಕಯೆ ಅಂಬ್ಯಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ.

 ಹೆರಿಗೆಯ ನಿರೀಕ್ಷೆಯಲ್ಲಿದ್ದ ಗರ್ಭಿಣಿ ಪಲ್ಲವಿ  ನೋವಿನಿಂದ ಬಳಲುತ್ತಿದ್ದಾಗ ಆಕೆಯನ್ನು ಕೂಡ್ಲೂರಿನಿಂದ  ರಾಮಾಪುರದತ್ತ ಆಗಮಿಸುತ್ತಿದ್ದಾಗ ಕಾನನದ ನಡುವೆಯೆ 108  ಆಂಬುಲೆನ್ಸ್ ನಲ್ಲಿ  ಸುಲಭ ಹೆರಿಗೆಯಾಗಿದೆ . ಹೆರಿಗೆ ಬಳಿಕ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಹೆರಿಗೆ ಬಳಿಕ ಕೂಡ್ಲೂರು  ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಬಾಣಂತಿಯನ್ನು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

 108 ಆಂಬುಲೆನ್ಸ್ ಇಎಮ್ ಟಿ ನಾಗರಾಜು ಹಾಗೂ ಚಾಲಕ ಮಲ್ಲೆಶ್  ಸಮಯ ಪ್ರಜ್ಞೆ ಕಾರ್ಯಕ್ಕೆ ಸಾರ್ವಜನಿಕವಕಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News