×
Ad

ಬರೇ ಪೆಟ್ರೋಲ್- ಡೀಸಲ್ ಅಲ್ಲ, ಬಿಜೆಪಿಯ ಸಿಎಂ ಹುದ್ದೆಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Update: 2022-05-08 18:03 IST

ಬೆಂಗಳೂರು, ಮೇ 8: ‘ಬಿಜೆಪಿ ಹೈಕಮಾಂಡ್ ಸಾವಿರಾರು ಕೋಟಿ ರೂ.ಗೆ ಸಿಎಂ ಹುದ್ದೆ ಮಾರಾಟ ಮಾಡುವ ಸಂಗತಿ ಹೊಸದಲ್ಲ, ಹಿಂದೆಯೇ ಅನಂತ್ ಕುಮಾರ್ ಮತ್ತು ಯಡಿಯೂರಪ್ಪನವರು ಹೇಳಿದ್ದರು, ಈಗ ಯತ್ನಾಳ್ ಅವರು ಹೇಳಿದ್ದಾರೆ ಅಷ್ಟೇ' ಎಂದು ಕೆಪಿಸಿಸಿ ವಕ್ತಾರ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಹೆಳಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಅಂದು 1 ಸಾವಿರ ಕೋಟಿ ರೂ.ಇದ್ದಿದ್ದು ಇಂದು 2,500 ಕೋಟಿ ರೂ.ಗಳಾಗಿದೆ. ಬರೇ ಪೆಟ್ರೋಲ್, ಡೀಸಲ್ ಅಲ್ಲ, ಬಿಜೆಪಿಯ ಸಿಎಂ ಹುದ್ದೆಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ!' ಎಂದು ಟೀಕಿಸಿದ್ದಾರೆ.

‘ಬಿಜೆಪಿಯಲ್ಲಿ ಅರ್ಹತೆ ಹಣವೇ ಹೊರತು ನಾಯಕತ್ವವಲ್ಲ. ಸಿಎಂ ಹುದ್ದೆಗೆ 2,500 ಕೋಟಿ ರೂ., ಆಪರೇಷನ್ ಕಮಲದಲ್ಲಿ ಶಾಸಕರ ಖರೀದಿಗೆ 40-60 ಕೋಟಿ ರೂ., ಮಂತ್ರಿಗಿರಿಗೆ 70-80 ಕೋಟಿ ರೂ., ಇಷ್ಟೆಲ್ಲ ಬಂಡವಾಳ ಹೂಡಿದವರು ಭ್ರಷ್ಟಾಚಾರದ ಬೆಳೆ ತೆಗೆಯದೆ ಇರುತ್ತಾರೆಯೇ?, ಸರಕಾರಿ ಹುದ್ದೆಗಳಿಗೂ ರೇಟ್ ಕಾರ್ಡ್ ಹಾಕಿ ಮಾರಾಟ ಮಾಡಿ ಬಂಡವಾಳ ವಾಪಸ್ ತೆಗೆಯುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News