×
Ad

ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ: ಪ್ರಮುಖ ಆರೋಪಿ ಕಾರಗೃಹಕ್ಕೆ

Update: 2022-05-08 20:19 IST
ಸಾಂರ್ಭಿಕ ಚಿತ್ರ 

ಬೆಂಗಳೂರು, ಮೇ 8: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್‍ನನ್ನು ಕೇಂದ್ರ ಕಾರಾಗೃಹ ಸುಪರ್ದಿಗೆ ಒಪ್ಪಿಸಲಾಗಿದೆ. 

ಚೌಕ್ ಠಾಣೆಯಲ್ಲಿ ದಾಖಲಾದ ಎಫ್.ಐ.ಆರ್‍ಗೆ ಸಂಬಂಧಿಸಿದಂತೆ ಆರ್.ಡಿ.ಪಾಟೀಲ್‍ನನ್ನು ಸಿಐಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ಸಿಐಡಿ ಕಸ್ಟಡಿ ಕಾಲಾವಕಾಶ ಮುಗಿದಿದ್ದು ರವಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. 

ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಸಂಬಂಧ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಎಂ.ಎಸ್.ಇರಾನಿ ಕಾಲೇಜ್‍ನಲ್ಲಿ ನಡೆದ ಅಕ್ರಮ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‍ಐ ಆರ್ ದಾಖಲಾಗಿದೆ. ಆರ್. ಡಿ.ಪಾಟೀಲ್, ಚಂದ್ರಕಾಂತ್ ಕುಲಕರ್ಣಿ, ಪ್ರಭು, ಶರಣಪ್ಪ ವಿರುದ್ದ ಎಫ್‍ಐಆರ್ ದಾಖಲಾಗಿದೆ.

ಇನ್ನೂ, ಜೈಲಿಗೆ ಹೋಗುವ ಮುನ್ನ ಆರೋಪಿ ಆರ್.ಡಿ.ಪಾಟೀಲ್ ಪ್ರತಿಕ್ರಿಯಿಸಿ, ನಾನು ಒಳ್ಳೆಯದನ್ನೂ ಮಾಡಿದ್ದೇನೆ, ಅದನ್ನೂ ಒಂದಿಷ್ಟು ಹೇಳಿ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News