ಬಿಜೆಪಿಯಲ್ಲಿ ಒಬ್ಬ ಸೀಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾನೆ: ಬಸನಗೌಡ ಪಾಟೀಲ್ ಯತ್ನಾಳ್

Update: 2022-05-08 14:52 GMT

ವಿಜಯಪುರ, ಮೇ 8: ಸದಾ ಒಂದಿಲ್ಲೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರವಿವಾರ ಮತ್ತೊಂದು ಹೇಳಿಕೆ ನೀಡಿದ್ದು, ಬಿಜೆಪಿಯಲ್ಲಿ ಒಬ್ಬ ಸೀಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ ಎಂದು ಹೇಳುವ ಮೂಲಕ ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ. 

ರವಿವಾರ ವಿಜಯಪುರದಲ್ಲಿ ಮತ್ತೊಂದು ಹೇಳಿಕೆ ನೀಡಿರುವ ಯತ್ನಾಳ್, ಕೆಲವರು 50ರಿಂದ 100 ಕೋಟಿ ರೂ. ಕೊಟ್ಟು ಮಂತ್ರಿ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಒಬ್ಬರು ಇದ್ದಾರೆ, ಅವರು, ಅರ್ಹತೆ ಮೇಲೆ ಸಚಿವರಾಗಿಲ್ಲ. ಸೀಡಿ ಇಟ್ಟುಕೊಂಡು ಮಂತ್ರಿಯಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಅವರು ಬ್ಲ್ಯಾಕ್ ಮೇಲ್ ಮಾಡುವವರು. ಬಸನಗೌಡ 2-ಎ ಮೀಸಲಾತಿ ಕೇಳೋದು, ಕುರುಬ, ಹಡಪದ ಸೇರಿ ದನಿಯಿಲ್ಲದ ಸಮಾಜಕ್ಕೆ ಮೀಸಲಾತಿ ಕೊಡಿ ಅನ್ನೋದು ಬ್ಲ್ಯಾಕ್ ಮೇಲ್ ಆಗಲ್ಲ. ಸೀಡಿ ಇಟ್ಟುಕೊಂಡು, ಎಲ್ಲರ ವಿಕ್ನೇಸ್ ಇಟ್ಟುಕೊಂಡು, ನನ್ನ ಮಂತ್ರಿ ಮಾಡಿಲಿಲ್ಲ ಅಂದರೆ ಇದನ್ನು ಹೊರಗೆ ಬಿಡ್ತೀನಿ ಅನ್ನೋದು ಬ್ಲ್ಯಾಕ್ ಮೇಲ್ ಆಗುತ್ತದೆ ಎಂದು ಹೇಳಿದ್ದಾರೆ. 

ನಾನು ಯಾರಿಗೂ ದುಡ್ಡು ಕೊಡುವ ಮಗನಲ್ಲ. 50 ಕೋಟಿ, 100 ಕೋಟಿ ರೂ.ಎಲ್ಲಿದು ಕೊಡಲಿ, ಎಲ್ಲಿಂದ ಕೊಡೋಕೆ ಆಗುತ್ತೆ. ಎಷ್ಟು ಲೂಟಿ ಮಾಡೋದು. ಬ್ಯಾಂಕ್‍ನಲ್ಲಿ 50 ಕೋಟಿ ರೂ. ಡಿಪಾಸಿಟ್ ಇಟ್ಟರೆ ಎಷ್ಟು ಆಗುತ್ತೆ ಬಡ್ಡಿ ಗೊತ್ತಿದೆ ಏನು? 25 ಲಕ್ಷ ರೂ.ತಿಂಗಳಿಗೆ ದಾನ ಮಾಡಿಕೊಂಡು ಆರಾಮ ಇರ್ತೇನೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News