ಬೊಮ್ಮಾಯಿ ಅಲ್ಲಿ ದುಡ್ಡು ಕೊಟ್ಟು ಬಂದು ಇಲ್ಲಿ ಸಿಎಂ ಆಗಿದ್ದಾರೆ: ಸಿದ್ದರಾಮಯ್ಯ

Update: 2022-05-08 17:05 GMT

ಬೆಂಗಳೂರು: 'ಬಸವರಾಜ ಬೊಮ್ಮಾಯಿಯವರು ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಲ್ಲ, ನೇಮಕಗೊಂಡ ಮುಖ್ಯಮಂತ್ರಿ, ಅಲ್ಲಿ ದುಡ್ಡು ಕೊಟ್ಟು ಬಿಟ್ಟು ಬಂದು ಇಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತಿಲ್ಲ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಬೊಮ್ಮಾಯಿಯವರನ್ನು ಆರೆಸ್ಸೆಸ್ ನವರು ಮುಖ್ಯಮಂತ್ರಿ ಮಾಡಿದ್ದಾರೆ, ಅವರನ್ನು ಕೇಳಿಕೊಂಡು ಕೂತಿದ್ದಾರೆ' ಎಂದರು.

'ನಾನು 5 ವರ್ಷ ಮುಖ್ಯಮಂತ್ರಿಯಾಗಿ 15 ಲಕ್ಷ ಮನೆಗಳನ್ನು ಕಟ್ಟಿಸಿದ್ದೆ, ಕಳೆದ 4 ವರ್ಷದ ಬಿಜೆಪಿ ಆಡಳಿತ ಬಡವರಿಗೆ ಒಂದು ಮನೆ ಕೊಟ್ಟಿಲ್ಲ, 2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಜನರಿಗೆ ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News