×
Ad

ಇಷ್ಟೆಲ್ಲ ಮಾಡಿದವರು ಪೊಲೀಸ್ ನೋಟಿಸ್‌ಗೆ ಬೆಚ್ಚಿ ಬೀಳುವುದೇಕೆ: ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಪ್ರಶ್ನೆ

Update: 2022-05-10 12:59 IST

ಬೆಂಗಳೂರು: 'ಬೇಕಾದಾಗಲೆಲ್ಲ ಸುದ್ದಿಗೋಷ್ಠಿ, ಆಡಿಯೋ ಟೇಪ್ ಬಿಡುಗಡೆ, ತನಿಖಾಧಿಕಾರಿಗಳಂತೆ ವರ್ತನೆ. ಇಷ್ಟೆಲ್ಲ ಮಾಡಿದವರು ಪೊಲೀಸ್ ನೋಟಿಸ್‌ಗೆ ಬೆಚ್ಚಿ ಬೀಳುವುದೇಕೆ?' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಪ್ರಶ್ನೆ ಮಾಡಿದೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ,  'ಪಿಎಸ್ಐ ನೇಮಕ ಹಗರಣ ಆರೋಪಿಗಳಾದ ರುದ್ರೇಗೌಡ ಪಾಟೀಲ್ ಸಹೋದರರು ಪ್ರಿಯಾಂಕ್ ಖರ್ಗೆ ಅತ್ಯಾಪ್ತರು. ಖರ್ಗೆ ಕುಟುಂಬಕ್ಕೆ ಆರೋಪಿಗಳು ನಿಷ್ಠರಾಗಿದ್ದಾರೆ. ಈ ಆರೋಪಿಗಳೇ ಹಗರಣದ ಪ್ರಧಾನ ಸೂತ್ರಧಾರರು. ಈ ಬಗ್ಗೆಯಾದರೂ ಸಿಐಡಿಗೆ ಸ್ಪಷ್ಟನೆ ನೀಡಿ' ಎಂದು ಬಿಜೆಪಿ ಹೇಳಿದೆ.

'ಸಿಐಡಿ ಪೊಲೀಸರು ಪ್ರಿಯಾಂಕ್‌ ಖರ್ಗೆ ಅವರಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅನ್ವಯ ನೋಟಿಸ್ ನೀಡಿದ್ದಾರೆ. ಇದಕ್ಕೆ ಉತ್ತರಿಸುವುದು ಖರ್ಗೆ ಅವರ ಸಂವಿಧಾನ ಬದ್ಧ ಕರ್ತವ್ಯ‌. ಖರ್ಗೆ ಕುಟುಂಬದವರು ಸಂವಿಧಾನಕ್ಕೆ ಅತೀತರೇ? ಅಥವಾ ಹಕ್ಕುಗಳಿಗೆ ಮಾತ್ರ ಭಾಜನರೇ ?' ಎಂದು ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News