'ಅಭಿವೃದ್ಧಿ' ಗಾಳಿಯಲ್ಲಿ ಹಾರಿ ಹೋಗುತ್ತಿದೆ, ಸಮುದ್ರದಲ್ಲೂ ತೇಲಿ ಹೋಗುತ್ತಿದೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

Update: 2022-05-10 09:35 GMT

ಬೆಂಗಳೂರು: '40% ಬಿಜೆಪಿ ಪಾಲು, 60% ಗಾಳಿ, ಸಮುದ್ರದ ಪಾಲು, ರಾಜ್ಯದ ಅಭಿವೃದ್ಧಿ ಮಣ್ಣುಪಾಲು' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. 

ನಗರದ ಬೊಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಎಚ್ಎಸ್ ಆರ್ ಬಡಾವಣೆಯಲ್ಲಿ ಮಾರ್ಚ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಛಾವಣಿ ಮಂಗಳವಾರ ಭಾರೀ ಗಾಳಿ ಮಳೆಗೆ ಕುಸಿದು ಬಿದ್ದಿದ್ದು,  ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮೂಲಕ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

''40% ಬಿಜೆಪಿಯ ಪಾಲು, 60% ಗಾಳಿ, ಸಮುದ್ರದ ಪಾಲು ರಾಜ್ಯದ ಅಭಿವೃದ್ಧಿ ಮಣ್ಣುಪಾಲು ಜನರ ಬದುಕು ಬೀದಿಪಾಲು! ಬಿಜೆಪಿ ಸರ್ಕಾರ ವಿಧಾನ ಸೌಧವನ್ನು "ವ್ಯಾಪಾರ ಸೌಧ" ಮಾಡಿರುವಾಗ 'ಅಭಿವೃದ್ಧಿ' ಎನ್ನುವುದು ಗಾಳಿಯಲ್ಲಿ ಹಾರಿ ಹೋಗುತ್ತಿದೆ, ಸಮುದ್ರದಲ್ಲೂ ತೇಲಿ ಹೋಗುತ್ತಿದೆ' ಎಂದು ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News