ಸಕಲೇಶಪುರ | ಕಾಡಾನೆ ದಾಳಿಗೆ ಮತ್ತೊಬ್ಬ ಕಾರ್ಮಿಕ ಬಲಿ: ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸಕಲೇಶಪುರ : ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕನೊಬ್ಬ ಕಾಡಾನೆ ತುಳಿತಕ್ಕೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಕಬ್ಬಿನಗದ್ದೆ ಗ್ರಾಮದ ರವಿಕುಮಾರ್ (48) ಆನೆ ತುಳಿತಕ್ಕೆ ಒಳಗಾಗಿ ಸಾವಿಗೀಡಾದ ಕಾಫಿ ತೋಟದ ಕೂಲಿ ಕಾರ್ಮಿಕ.
ಇಂದು ಬೆಳಗ್ಗೆ ಬಾಳ್ಳುಪೇಟೆಯ ಬಿ. ಡಿ. ವಿಶ್ವನಾಥ್ ಅವರ ಕಬ್ಬಿನಗದ್ದೆ ಗ್ರಾಮದಲ್ಲಿರುವ ಕೆಲಸಕ್ಕೆ ಹೋಗಿದ್ದರು. ಕಾಫಿ ಗಿಡಗಳ ಮಧ್ಯೆ ಇದ್ದ ಕಾಡಾನೆಗಳು, ಏಕಾಏಕಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕಾಡಾನೆಗಳ ದಾಳಿಯಿಂದ ಪಾರಾಗಲು ಪ್ರಯತ್ನಮಾಡಿದ್ದಾರೆ. ಆದರೆ ಸಾಧ್ಯವಾಗದೆ ಕಾಡಾನೆ ದಾಳಿಗೆ ರವಿಕುಮಾರ್ ಬಲಿಯಾಗಿದ್ದಾರೆ.
ಪ್ರತಿಭಟನೆ: ಕಾಡಾನೆಗೆ ಕಾರ್ಮಿಕ ಬಲಿಯಾದ ಘಟನೆಯ ಸುದ್ದಿ ತಿ ಕೇಳಿದ ಬೆಳಗೋಡು ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಕಾಡಾನೆ ಸಮಸ್ಯೆ ಪರಿಹರಿಸದ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳ ಹಿಂದೆ ಕಡೆಗರ್ಜೇ ಗ್ರಾಮದಲ್ಲಿ ಇಬ್ಬರು ಕಾರ್ಮಿಕರು ಬಲಿಯಾದ ವೇಳೆ ಎರಡು ಕಾಡಾನೆ ಹಿಡಿಯುವುದು ಹಾಗೂ ಮತ್ತೇರಡು ಕಾಡಾನೆಗೆ ರೇಡಿಯೋಕಾಲರ್ ಆಳವಡಿಸುವ ಭರವಸೆ ನೀಡಿದ್ದರು. ಈ ಭರವಸೆ ಸಹ ಈಡೇರಿಲ್ಲ. ತಾಲೂಕಿನ ಬಹುತೇಕ ಗ್ರಾಮಗಳ ಜನರು ಕಾಡಾನೆಗಳಿಂದಾಗಿ ದಿಗ್ಬಂಧನದ ಬಧುಕು ನಡೆಸುತ್ತಿದ್ದಾರೆ. ನಿರ್ಭಿತಿಯಿಂದ ತೋಟಗಳಿಗಾಗಲಿ ರಸ್ತೆಯಲ್ಲಾಗಲಿ ಸಂಚರಿಸುವಂತಿಲ್ಲ. ಎರಡು ಕಾಡಾನೆ ಹಿಡಿಯುವುದರಿಂದ ಅಥಾವ ರೈಲ್ವೆ ಬ್ಯಾರಿಕೆಡ್ ನಿರ್ಮಾಣದಿಂದಾಗಲಿ ಸಮಸ್ಯೆ ಬಗೆಹರಿಯವುದಿಲ್ಲ. ಕಾಡಾನೆಗಳನ್ನು ಸಂಪೂರ್ಣ ಸ್ಥಳಾಂತರಿಸ ಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುವವರಗೆ ಮೃತದೇಹ ಮೇಲೆತ್ತಲು ಬಿಡುವುದಿಲ್ಲ ಎಂದು ಸ್ಥಳಕ್ಕೆ ಬಂದ ತಹಸೀಲ್ದಾರ್ ಜಯಕುಮಾರ್ ಹಾಗೂ ಅರಣ್ಯಾಧಿಕಾರಿಗಳೊಂದಿಗೆ ವಾಗ್ವದ ನಡೆಸಿದರು. ಆದರೆ, ಮೃತದೇಹ ಮುಂದಿಟ್ಟುಕೊಂಡು ಪ್ರತಿಭಟನೆ ಮುಂದುವರಿಸಲು ಮೃತನ ಕುಟುಂಬಸ್ಥರು ಸಮ್ಮತಿಸದ ಕಾರಣ ಪ್ರತಿಭಟನೆ ಹಿಂದೆ ಪಡೆಯಲಾಯಿತು.
ಆದರೆ ಇಷ್ಟಕ್ಕೆ ಸುಮ್ಮನಿರದ ಪ್ರತಿಭಟನಾಕಾರರು . ಬಾಳ್ಳು ಪೇಟೆಯ ವೃತ್ತದಲ್ಲಿ ರಸ್ತೆ ತಡೆದು ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ದ ಘೋಷಣೆ ಕೂಗಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಶಾಸಕ ಹೆಚ್.ಕೆ. ಕುಮಾರಸ್ವಾಮಿ ಕ್ರಾಫರ್ಡ್ ಆಸ್ಪತ್ರೆಗೆ ತೆರಳಿ ಮೃತರ ಕು ಕುಟುಂಬಕ್ಕೆ ಸಾಂತ್ವಾನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಿರಂತರವಾಗಿ ಆನೆಗಳಿಂದ ಈ ಭಾಗದ ಜನರು ಜೀವ ಹಾಗೂ ಬೆಳೆಗಳನ್ನು ಕಳೆದುಕೊಂಡು ನಿರ್ಭೀತಿಯಿಂದ ಸಂಚರಿಸಲು ಸಾದ್ಯವಾಗದ ಪರಿಸ್ಥಿತಿ ಉಂಟಾಗಿದ್ದು ಶೀಘ್ರದಲ್ಲೇ ಸರ್ಕಾರದ ಗಮನ ಸೆಳೆಯುವ ದೃಷ್ಠಿಯಿಂದ ತಾಲೂಕಿನ ವಿವಿದ ಸಂಘಟನೆಗಳು ,ಜನ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿ ಮುಂದಿನ ಹೋರಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನಂತರ ಮೃತದೇಹವನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ. ಹಸ್ತಾಂತರಿಸಲಾಯಿತು.