''ಧರ್ಮದ ಹೆಸರಲ್ಲಿ ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾದ ಸಂಸದರು-ಶಾಸಕರಿಗೆ ಜನರು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ''

Update: 2022-05-10 15:03 GMT
ಪ್ರಕಾಶ್ ರಾಥೋಡ್

ಬೆಂಗಳೂರು: ಕೇವಲ 2 ವರ್ಷದಲ್ಲಿ ದೇಶದ ಸ್ಥಿತಿ ಉಲ್ಟಾ ಆಗಿದೆ. ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ದೇಶದ ಜನರನ್ನು ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾ ಆಡಳಿತ ಪಕ್ಷದ ಸಂಸದರು-ಶಾಸಕರನ್ನು ಜನ ಹಿಡಿದು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ ಎಂದು ವಿಧಾನಪರಿಷತ್‍ನ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ್ ಕೆ. ರಾಥೋಡ್ ಹೇಳಿದ್ದಾರೆ.

ಮಂಗಳವಾರ ಟ್ವೀಟ್ ಮಾಡಿರುವ ಅವರು, ' ಭಾರತವೂ ಹಣದುಬ್ಬರ-ಬೆಲೆ ಏರಿಕೆಯ ಪಾತಾಳಕ್ಕೆ ಜಾರುತ್ತಾ ಕೋಮುದಳ್ಳುರಿ ಹೆಚ್ಚುತ್ತಿದೆ ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ದೇಶ ಬೆಲೆ ಏರಿಕೆ-ಹಣದುಬ್ಬರ-ಉದ್ಯಮಗಳ ಪಲಾಯನ-ದೇಶದ ಆಸ್ತಿಗಳ ಮಾರಾಟ-ಆದಾಯಕ್ಕಿಂತ ಸಾಲದ ಮೊತ್ತ ಹೆಚ್ಚಳ-ದೇಶದ ಜನ ಬಡವರಾಗುತ್ತಾ ಕೆಲವೇ ಉದ್ಯಮಿಗಳು ದೇಶದ ಆಸ್ತಿ ಖರೀದಿಸುತ್ತಾ ವಿಶ್ವ ಶ್ರೀಮಂತರ ಪಟ್ಟಿಗೆ ಸೇರುತ್ತಾ ಹೋದರು. ಆಡಳಿತ ಪಕ್ಷ ಆರ್ಥಿಕವಾಗಿ ಶ್ರೀಲಂಕಾ ದೇಶವನ್ನು ದಿವಾಳಿ ಮಾಡಿದ ಪರಿಣಾಮ ಇದು' ಎಂದು ರಾಥೋಡ್ ಹೇಳಿದ್ದಾರೆ.

 ಶ್ರೀಲಂಕಾದ ವಿವಿಧ ಭಾಗಗಳಲ್ಲಿ ಭುಗಿಲೆದ್ದ ಸರಕಾರದ ಪರ -ವಿರೋಧಿ ಪ್ರತಿಭಟನಕಾರರ ನಡುವಿನ ಘರ್ಷಣೆ ಬಳಿಕ ಶ್ರೀಲಂಕಾದ ಆಡಳಿತಾರೂಢ ಪಕ್ಷದ ಸಂಸದ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News