×
Ad

ಬಸ್ ನಿಲ್ದಾಣದಲ್ಲಿ ಯುವಕನ ಕೈಗೆ ಮಗು ನೀಡಿ ನಾಪತ್ತೆಯಾದ ಮಹಿಳೆ!

Update: 2022-05-10 21:49 IST

ಮೈಸೂರು, ಮೇ 10: ವೈಯಕ್ತಿಕ ಕೆಲಸಕ್ಕೆಂದು ರಾಯಚೂರಿಗೆ ತೆರಳಿದ್ದ ಯುವಕ ಮೈಸೂರು ಬಸ್ ಗೆ ಕಾಯುತ್ತಿದ್ದ  ವೇಳೆ ಅಪರಿಚಿತ ಮಹಿಳೆಯೊಬ್ಬರು  ತನ್ನ 9 ತಿಂಗಳ ಮಗುವನ್ನು ಯುವಕನ ಕೈಗೆ ನೀಡಿ ಮೂರು ಗಂಟೆಗಳು ಕಳೆದರೂ ವಾಪಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ನಡೆದಿದೆ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ನಿವಾಸಿ ರಘು ಕೆಲಸದ ಮೇಲೆ ರಾಯಚೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

ರಘು ಮಗುವನ್ನು ಸುರಕ್ಷಿತವಾಗಿ  ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಲಷ್ಕರ್ ಪೊಲೀಸ್ ಠಾಣೆಗೆ ಮಗುವನ್ನು ನೀಡಿದ್ದಾರೆ.

ಮಗುವನ್ನು ಆರೈಕೆ ಮಾಡಿದ ಸಿಬ್ಬಂದಿ ಬಾಲ ಮಂದಿರಕ್ಕೆ ಮಗುವನ್ನು ಒಪ್ಪಿಸಿ ತಾಯಿಯನ್ನು ಪತ್ತೆ ಹಚ್ಚುವಂತೆ ರಾಯಚೂರು ಪೊಲೀಸರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News