ವಿಜಯಪುರ: ವಸತಿ ನಿಲಯ ಅವ್ಯವಸ್ಥೆ ಖಂಡಿಸಿ ರಾತ್ರೋರಾತ್ರಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2022-05-10 18:26 GMT
ವಿದ್ಯಾರ್ಥಿಗಳ ಪ್ರತಿಭಟನೆ

ವಿಜಯಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿ ವಸತಿ ನಿಲಯ ಅವ್ಯವಸ್ಥೆ ಖಂಡಿಸಿ ವಸತಿ ನಿಲಯ ವಿದ್ಯಾರ್ಥಿಗಳು ಭೂತನಾಳ ಗ್ರಾಮದಿಂದ ಪಾದಯಾತ್ರೆ‌ ನಡೆಸಿ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. 

ಸಂಜೆ ದಿಢೀರನೆ ವಿದ್ಯಾರ್ಥಿಗಳು ಹಾಸ್ಟೆಲ್ ಅವ್ಯವಸ್ಥೆ ಕುರಿತಾದ ಘೋಷಣೆಗಳನ್ನು ಕೂಗಿ‌ ಜಿಲ್ಲಾಧಿಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ವಸತಿ ನಿಲಯ ಸಿಬ್ಬಂದಿ ಕಿರುಕುಳ ಸಾಕಾಗಿದೆ,  ದಬ್ಬಾಳಿಕೆ ವ್ಯಾಪಕವಾಗಿದೆ. ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ, ಒಂದು ತುತ್ತು ಬಾಯಲ್ಲಿ ಹಾಕದಂತಹ ಕಳಪೆ‌ ಆಹಾರ ನೀಡಲಾಗುತ್ತಿದೆ. ಸಮಸ್ಯೆಗೆ ಪರಿಹಾರ ದೊರಕಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ವಸತಿ ನಿಲಯಕ್ಕೆ ಧಾವಿಸಿದ ಜಿಲ್ಲಾಧಿಕಾರಿ:  ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಮಸ್ಯೆಗಳನ್ನು ಪರಿಹರಿಸುವೆ, ನಿಮ್ಮ ವಸತಿ ನಿಲಯಕ್ಕೆ ನಾನೇ ಖುದ್ದಾಗಿ ಭೇಟಿ ಅಳಿಯ, ಅಲ್ಲಿ ವಸತಿ ನಿಲಯ ಸಿಬ್ಬಂದಿ ಕಾರ್ಯವೈಖರಿ ಲೋಪವಾಗಿದ್ದರೆ ತಕ್ಷಣವೇ ಅವರ ಮೇಲೆ‌ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಸತಿ ನಿಲಯಕ್ಕೆ ಧಾವಿಸಿದರು.

ಇದೇ ವೇಳೆಯಲ್ಲಿ ಪ್ರತಿಭಟನಾಕಾರ ಮನವಿಗೆ ಡಿಸಿ ಸ್ಪಂದಿಸಿ ದಿಢೀರ್‌ನೆ ಹಾಸ್ಟೆಲ್‌ಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು‌‌. ಈ ವೇಳೆಯಲ್ಲಿ ಹಾಸ್ಟೆಲ್ ನಲ್ಲಿರುವ ಆಹಾರವನ್ನು ಡಿಸಿ ದಾನಮ್ಮನವರ ಟೆಸ್ಟ್ ಮಾಡುವ ಮೂಲಕ ಚೆಕ್ ಮಾಡಿದರು‌. ಇನ್ನು ವಿದ್ಯಾರ್ಥಿಗಳು ವಾರ್ಡ್‌ನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿಯವರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News