ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ಮೋದಿ ಆಡಳಿತ ಎಷ್ಟು ಅದ್ಭುತವಲ್ಲವೆ?: ದಿನೇಶ್ ಗುಂಡೂರಾವ್

Update: 2022-05-11 07:37 GMT

ಬೆಂಗಳೂರು:  'ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ?' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿದ ಅವರು, ' ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಕೇಂದ್ರ ಸರ್ಕಾರದ ಕಳಪೆ ಆರ್ಥಿಕ ನಿರ್ವಹಣೆಯಿಂದಾದ ಹಣದುಬ್ಬರ ಹಾಗೂ ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುತ್ತಿರುವುದು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣ. ಸ್ವಘೋಷಿತ ವಿಶ್ವಗುರು ಮೋದಿ ಭಾರತವನ್ನು‌ ಇನ್ನೊಂದು ಶ್ರೀಲಂಕಾ ಮಾಡುವುದರಲ್ಲಿ ಅನುಮಾನವೇ ಇಲ್ಲ' ಎಂದು  ಹೇಳಿದ್ದಾರೆ.

''ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ 15 ರೂಗೆ 1 ಡಾಲರ್ ಕೊಡುವ ಕಾಲ ಬರುತ್ತದೆ ಎಂದಿದ್ದರು. ಮೋದಿ ಅಧಿಕಾರಕ್ಕೆ ಬಂದು 8 ವರ್ಷವಾಯಿತು. 15 ರೂ.ಗೆ 1ಡಾಲರ್ ಆಗುವುದಿರಲಿ ಈಗ 77  ರೂ.ಗೂ 1 ಡಾಲರ್ ಸಿಗದಂತಾಗಿದೆ. ಕಟೀಲ್‌ರವರೆ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ?'' ಎಂದು ಲೇವಡಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News