ಶಿವಮೊಗ್ಗ: ಕಾಲುವೆಗೆ ಈಜಲು ಹೋದ ಇಬ್ಬರು ಮಕ್ಕಳು ನೀರು ಪಾಲು; ಸ್ಥಳದಲ್ಲಿ ಶೋಧ ಕಾರ್ಯ
Update: 2022-05-11 22:17 IST
ಶಿವಮೊಗ್ಗ: ಹೊಳೆ ಹೊನ್ನೂರು ಸಮೀಪದ ಹೆಂಚಿನ ಸಿದ್ದಾಪುರ ಗ್ರಾಮದ ಭದ್ರಾ ಬಲದಂಡೆ ಕಾಲುವೆಗೆ ಈಜಲು ಹೋದ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ನಡೆದಿದೆ.
ಅಗರದಹಳ್ಳಿ ಗ್ರಾಮದ ಲೋಹಿತ್ ಎಂಬುವರ ಮಕ್ಕಳಾದ ಚಂದನಾ(14) ಹಾಗೂ ಹರ್ಷ (10) ಎಂಬುವರು ಬುಧವಾರ ಬೆಳಿಗ್ಗೆ ತಮ್ಮ ದೊಡ್ಡಪ್ಪನ ಜೊತೆಗೆ ಕಾಲುವೆಗೆ ಸ್ನಾನ ಮಾಡಲು ಹೋದಾಗ ನೀರಲ್ಲಿ ಮುಳುಗಿದ ಮಕ್ಕಳು ಮತ್ತೆ ಮೇಲೆ ಬರಲಿಲ್ಲ. ಪ್ರಕರಣ ಪಟ್ಟಣದ ಠಾಣೆಯಲ್ಲಿ ದಾಖಲಾಗಿದೆ.
ಬೆಳಿಗ್ಗೆಯಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಹರ ಸಾಹಸ ಪಟ್ಟರು ಫಲಕಾರಿಯಾಗಲಿಲ್ಲ. ಕತ್ತಲಾದ ಪರಿಣಾಮ ಕಾರ್ಯಾಚರಣೆಯನ್ನು ನಾಳೆಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.