ಬಿಇಎಲ್‍ನ ಪ್ಯಾರಾ ಅಥ್ಲೆಟಿಕ್‍ಗೆ ಭಡ್ತಿ ನೀಡಿ: ಹೈಕೋರ್ಟ್ ಆದೇಶ

Update: 2022-05-12 16:48 GMT

ಬೆಂಗಳೂರು, ಮೇ 12: ಉದ್ಯೋಗದಿಂದ ನಿವೃತ್ತಿ ಹೊಂದಲು ಒಂದು ತಿಂಗಳು ಬಾಕಿಯಿದ್ದ ಅರ್ಜುನ ಪ್ರಶಸ್ತಿ ಪುರಸ್ಕøತ ಪ್ಯಾರಾ ಅಥ್ಲೀಟ್‍ಗೆ ಭಡ್ತಿ ಸೇರಿ ಇತರೆ ಎಲ್ಲ ಆರ್ಥಿಕ ಸೌಲಭ್ಯ ಕಲ್ಪಿಸುವಂತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ಗೆ(ಬಿಇಎಲ್) ಹೈಕೋರ್ಟ್ ನಿರ್ದೇಶಿಸಿದೆ. 

ಸೌಲಭ್ಯ ಕಲ್ಪಿಸಲು ಕೈಗಾರಿಕಾ ನ್ಯಾಯಾಧೀಕರಣ ನೀಡಿದ್ದ ಆದೇಶ ಪ್ರಶ್ನಿಸಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವಿಶೇಷಚೇತನರ ಕೋಟಾದಡಿಯಲ್ಲಿ ಬಿಇಎಲ್ ಡ್ರಾಫ್ಟ್ಸ್‍ಮನ್ ಡಬ್ಲ್ಯೂಜಿ-3 ಶ್ರೇಣಿಯ ಉದ್ಯೋಗಕ್ಕೆ 1998ರ ಜ.1ರಂದು ವೆಂಕಟರಮಣಪ್ಪ ಸೇರಿದ್ದರು. ಬ್ರಿಸ್ಟೇನ್ ಸೇರಿ ಹಲವು ದೇಶಗಳಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಪ್ಯಾರಾ-ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಇವರು ಮತ್ತಷ್ಟು ಕ್ರೀಡಾಕೂಟಗಳಲ್ಲಿ ಭಾಗಿಯಾಗಬೇಕಿತ್ತು.

ಆದರೆ, ವೆಂಕಟರಮಣಪ್ಪ ಸೀಮಿತ ಆದಾಯದ ಮೂಲ ಹೊಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರಿಗೆ ಅಗತ್ಯ ಭಡ್ತಿ, ಹಣಕಾಸು ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಬಿಇಎಲ್‍ಗೆ ನಿರ್ದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News