ಮಂದಿರ ಅಥವಾ ಮಸೀದಿ ನಿಯಮ ಎಲ್ಲರಿಗೂ ಅನ್ವಯ: ಸಚಿವೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ

Update: 2022-05-12 18:39 GMT

ಬೆಂಗಳೂರು, ಮೇ 12: ‘ದೇವಸ್ಥಾನ, ಮಸೀದಿ ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಬಳಕೆ ಮಾಡುವ ಮೈಕ್‍ಗಳ ಶಬ್ದ ನಿರ್ದಿಷ್ಟವಾಗಿರಬೇಕು ಎಂದು ಸೂಚನೆ ನೀಡಿದ್ದು, ಎಲ್ಲರೂ ಆ ನಿಯಮ ಪಾಲನೆ ಮಾಡಬೇಕು. ಮಂದಿರ ಅಥವಾ ಮಸೀದಿ ಎಲ್ಲ ಕಡೆಗಳಲ್ಲಿಯೂ ಸರಕಾರದ ಆದೇಶ ಪಾಲನೆ ಕಡ್ಡಾಯ' ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಸಂಬಂಧ ಈಗಾಗಲೇ ಆದೇಶ ಮಾಡಲಾಗಿತ್ತು. ಆದರೂ ನಿಯಮ ಪಾಲನೆ ಆಗಿರಲಿಲ್ಲ. ಈಗ ನೋಟಿಸ್ ಜಾರಿ ಮಾಡಿದ ಬಳಿಕ ದೇವಸ್ಥಾನಗಳಿಗೂ ಅನ್ವಯ ಆಗಲಿದೆ. ಈವರೆಗೂ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ' ಎಂದು ಸ್ಪಷ್ಟಪಡಿಸಿದರು.

ಆಝಾನ್ ಹಾಗೂ ಸುಪ್ರಭಾತ ನಿರ್ದಿಷ್ಟ ಸಮಯದಲ್ಲೇ ನಡೆಯಬೇಕಿದೆ. ರಾತ್ರಿ ಮತ್ತು ಹಗಲು ಹೊತ್ತಿನ ನಿರ್ದಿಷ್ಟ ಅವಧಿಯಲ್ಲಿ ಮೈಕ್ ಹಾಕಬೇಕು. ಒಂದು ವೇಳೆ ಪಾಲನೆ ಆಗಿಲ್ಲವೆಂದರೆ ತಪ್ಪಾಗುತ್ತದೆ. 2002ರಲ್ಲಿ ಮಂದಿರ, ಮಸೀದಿ ಎಷ್ಟು ಡೆಸಿಬಲ್ ಮೈಕ್ ಹಾಕಬೇಕೆಂದು ಕೋರ್ಟ್ ಹೇಳಿದೆ. ಸುತ್ತೋಲೆ ಹೊರಡಿಸಿರುವುದು ನಮಗೆ ಅನ್ವಯ ಆಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News