ವೈದ್ಯಕೀಯ ಶಿಕ್ಷಣದ ಅವ್ಯವಹಾರವನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ: ಕಾಂಗ್ರೆಸ್

Update: 2022-05-13 14:58 GMT

ಬೆಂಗಳೂರು, ಮೇ 13: ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ, ಫಾರ್ಮಸಿ ಮತ್ತು ನಸಿರ್ಂಗ್ ಸೇರಿದಂತೆ ಆರೋಗ್ಯ ಇಲಾಖೆಯ ಶಿಕ್ಷಣದಲ್ಲಿ ಆಗಿರುವ ಅವ್ಯವಹಾರಗಳು ಹಾಗೂ ಹಗರಣಗಳನ್ನು ಸರಿಪಡಿಸದಿದ್ದರೆ ರಾಜ್ಯ ಸರಕಾರವು ಉಗ್ರ ಹೋರಾಟವನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಎಚ್ಚರಿಕೆ ನೀಡಿದೆ.

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಕೆಪಿಸಿಸಿ ವಕ್ತಾರ ಮಹಾಂತೇಶ್ ಲಕ್ಷ್ಮಣ ಹಟ್ಟಿ ಅವರು ಮಾತನಾಡಿ, ಹೊರ ರಾಜ್ಯದವರಿಗೆ ಅನುಕೂಲ ಮಾಡಿಕೊಡಲು ನೀಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ, ಅದನ್ನು ರದ್ದು ಪಡಿಸಬೇಕು. ಪಿಎಸ್‍ಐ ಹಗರಣದಲ್ಲಿನ ಸಿಲುಕಿರುವ ದಿವ್ಯಾ ಹಾಗರಗಿ ಅಂತವರನ್ನು ರಾಜ್ಯ ನಸಿರ್ಂಗ್ ಕೌನ್ಸಿಲ್ ಮೆಂಬರ್ ಅನ್ನು ಮಾಡಿ ಸರಕಾರಕ್ಕೆ ಹಣ ಹೊಡೆಯುವ ಒಂದು ತಂತ್ರವನ್ನು ರೂಪಿಸಿದ್ದಾರೆ. ಹೀಗೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಹಗರಣಗಳು ಎದ್ದು ಕಾಣುತ್ತಿವೆ ಎಂದು ಆರೋಪಿಸಿದರು.

ಡೆಂಟಲ್ ಕಾಲೇಜುಗಳಲ್ಲಿ ಬಹಳಷ್ಟು ಸೀಟ್‍ಗಳು 2 ವರ್ಷದಿಂದ ಖಾಲಿ ಇವೆ. ಡಿ. ಫಾರ್ಮಸಿ ಬೋರ್ಡ್‍ನಿಂದ ನಿಗದಿತ ಸಮಯದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲ. ಅಲ್ಲದೆ ತಡವಾಗಿ, ಫಲಿತಾಂಶ ನೀಡುತ್ತಾರೆ ಎಂದು ಅವರು ಆರೋಪಿಸಿದರು.

ನರ್ಸಿಂಗ್ ಶಿಕ್ಷಣವು ದುಬಾರಿಯಾಗಿದ್ದು, ಬಡ ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಎಂಬಿಬಿಎಸ್ ಮುಗಿದ ತಕ್ಷಣ ಪಿಜಿ ಸೀಟ್‍ಗಳನ್ನು ಸರಕಾರ ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. 

ಸಚಿವ ಡಾ. ಕೆ.ಸುಧಾಕರ್ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡನ್ನೂ ನಿಭಾಯಿಸುವ ಒಂದು ದೊಡ್ಡ ಅವ್ಯವಹಾರದ ಜಾಲವೇ ಮಂತ್ರಿಗಳಾಗಿದ್ದಾರೆ. ಈ ಹಿಂದಿನ ಸಚಿವರಾದ ರಮೇಶ್ ಕುಮಾರ್ ರವರು ಮತ್ತು ಶರಣ ಪ್ರಕಾಶ್ ಪಾಟೀಲ್‍ರವರು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತಹ ಕಾಲೇಜುಗಳಿಗೆ ಅನುಮತಿ ಕೊಟ್ಟು, ಯಾವುದೇ ಹಗರಣವಿಲ್ಲದೆ ಯಶಸ್ವಿಯಾಗಿ ಈ ಇಲಾಖೆಯನ್ನು ನಡೆಸಿದರು. ಆದರೆ ಈಗಿರುವಂತಹ ಸಚಿವರು ಸಾವಿರಾರು ಕೋಟಿ ಹಗರಣವನ್ನು ಮಾಡುವ ನಿಟ್ಟಿನಲ್ಲಿ ಹೊರಟಿದ್ದಾರೆ. 

-ಮಹಾಂತೇಶ್ ಲಕ್ಷ್ಮಣ ಹಟ್ಟಿ, ಕೆಪಿಸಿಸಿ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News