ತಾಯಿಯ ಖಾತೆಗೆ ಕೇಂದ್ರದಿಂದ ಹಣ ಹೇಗೆ ಬಂತು: ನಳಿನ್ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ಪ್ರಶ್ನೆ

Update: 2022-05-14 09:50 GMT

ಬೆಂಗಳೂರು: 'ನನ್ನ ತಾಯಿಯ ಖಾತೆಗೆ ಸರಕಾರದಿಂದ 1 ಲಕ್ಷ ರೂ. ಬಂದಿದೆ' ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ , 'ಸಂಸದರ ತಾಯಿಯ ಖಾತೆಗೆ ಕೇಂದ್ರದಿಂದ ಹೇಗೆ ಹಣ ಸಂದಾಯವಾಯಿತು? ' ಎಂದು ಪ್ರಶ್ನಿಸಿದೆ. 

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್, ' ಇದು ಯಾವ ಯೋಜನೆಯ ಹಣ? ಲಕ್ಷಗಟ್ಟಲೆ ಸಂಬಳ ಪಡೆಯುವವರ ತಾಯಿ ಫಲಾನುಭವಿ ಆದದ್ದು ಹೇಗೆ? ಯಾವ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಬಂದಿದೆ? ಅಂತಹ ಯಾವ ಯೋಜನೆ ಇದೆ? ಸಂಸದರು ಮಾಹಿತಿ ನೀಡಬೇಕು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಒತ್ತಾಯಿಸಿದೆ. 

''ನನ್ನ ಖಾತೆಯಲ್ಲಿ 1 ಲಕ್ಷ ರೂ. ಇದೆ, ಅದು ಸರಕಾರದಿಂದ ಬಂದಿದೆ ಎಂದು  ತಾಯಿ ಹೇಳಿದರು. ಪ್ರತಿಯೊಬ್ಬ ರೈತನ ಖಾತೆಗೆ 1 ಲಕ್ಷ, 2ಲಕ್ಷ, 3 ಲಕ್ಷ ರೂಪಾಯಿಗಳು ಬಂದಿದೆ. ಯಾವುದೇ ಅರ್ಜಿ ಹಾಕದೆ ನೇರವಾಗಿ ಬಂದಿದ್ದರೆ ಅದು ನರೇಂದ್ರ ಮೋದಿ ಸರಕಾರದ ಕೊಡುಗೆ'' ಎಂದು ಇತ್ತೀಚೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News