×
Ad

ಹಂಗಾಮುವಾರು ಬೆಳೆ ವಿಮೆ ಶೀಘ್ರ ಇತ್ಯರ್ಥ ಪಡಿಸಲು ಕ್ರಮ: ಸಚಿವ ಬಿ.ಸಿ.ಪಾಟೀಲ್

Update: 2022-05-14 17:32 IST

ಬೆಂಗಳೂರು, ಮೇ 14: ಹಂಗಾಮುವಾರು ಬೆಳೆ ವಿಮೆ ಶೀಘ್ರ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಬೆಳೆ ವಿಮೆಗೆ ಅನುಕೂಲ ಕಲ್ಪಿಸುವ ‘ನನ್ನ ಬೆಳೆ ನನ್ನ ಹಕ್ಕು' ಬೆಳೆ ಸಮೀಕ್ಷೆ ಯೋಜನೆಗೆ ರೈತರು ಹೆಚ್ಚು ಒತ್ತು ನೀಡಿ ರೈತರೇ ಸ್ವತಃ ಮೊಬೈಲ್ ಬೆಳೆ ಸಮೀಕ್ಷೆಯನ್ನು ಯಶಸ್ವಿಯಾಗಿ ಮಾಡುವಂತೆ ನೋಡಿಕೊಳ್ಳಬೇಕು. ಬೆಳೆ ಸಮೀಕ್ಷೆ ಹಂಗಾಮುವಾರು ಸರಿಯಾಗಿ ಅಪ್ಲೋಡ್ ಆಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಇ-ಆಡಳಿತ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖಾಧಿಕಾರಿಗಳೊಂದಿಗೆ ತಾಂತ್ರಿಕ ದೋಷಗಳು ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು. ಬೆಳೆ ಕಟಾವು ಪ್ರಯೋಗಗಳ ದತ್ತಾಂಶ ಹಾಗೂ ಬೆಳೆ ಸಮಿಕ್ಷೆ ದತ್ತಾಂಶವನ್ನು ಅಧಿಕಾರಿಗಳು ತಾಳೆ ಮಾಡಿ ಅಪ್ಲೋಡ್ ಮಾಡಿ ಬೆಳೆ ವಿಮೆಯನ್ನು ಘಟಕವಾರು ಇತ್ಯರ್ಥಪಡಿಸಬೇಕೆಂದು ತೀರ್ಮಾನಿಸಲಾಯಿತು ಎಂದರು.

2022ರ ಬೆಳೆವಿಮೆಯನ್ನು 2022ರ ನವೆಂಬರ್ ಒಳಗೆ ಇತ್ಯರ್ಥಪಡಿಸಬೇಕು. ಆದ ಬಳಿಕ ರೈತರ ಪಹಣಿಯಲ್ಲಿ ತಕ್ಷಣವೇ ತರಲು ಸೂಚಿಸಲಾಯಿತು. ಸಭೆಯಲ್ಲಿ ಇ-ಆಡಳಿತ ಪ್ರಧಾನ ಕಾರ್ಯದರ್ಶಿ  ಪೊನ್ನುರಾಜ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ್, ಕೃಷಿ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ, ಇ-ಆಡಳಿತ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News